Submission 2701

ಮನಸ್ಸಿಂದು

Submitted By: Honnagirivasu

----------------------------------

ಓ ಒಲವೇ ನಿ ಯಾರೆಂದು ಹೇಳಿಬಿಡು ಒಮ್ಮೆಲೆ ಬರೆದಿರುವೆ ನಿನ್ನ ಹೆಸರ ಈ ಮನದ ತುಂಬಯೆಲ್ಲೆಡೆ ಪ್ರೀತಿಯ ದಡ ಸೇರುವ ಆಸೆ ನನ್ನ ಪ್ರೀತಿಯ ಕಣ್ಮಣಿಯೆ ಮನಸ್ಸಿಂದು ಹಂಬಲಿಸುತಿದೆ ನಿನ್ನ ಪ್ರೀತಿಯ ಕೊಡುಗೆಗೆ ನಿನ್ನ ಮುದ್ದಾದ ಚಿತ್ತವ ನನ್ನ ಕಡೇ ತಿರುಗಿಸ ಬಾರದೇ ನವಿರಾದ ಸಾವಿರ ಸಾಲುಗಳ ಗಿಚುವೇ ಒಮ್ಮೆಲೆ ನಿನ್ನ ಮೊಗ ಸಿರಿಯ ನೋಡುತ್ತಾ ಕಳೆದೋದೆ ಒಲವೇ ಮನಸ್ಸಿಂದು ಹೇಳುತಿದೆ ನಿನ್ನವಳು ಚೆಲುವ ಸಂಪಿಗೆ ನಿನ್ನ ಹೊಳೆವ ಕಣ್ಣಗಳ ಕಣ್ಣ ಕಾಡಿಗೆಯಲೂ ನಾನಿರುವೆ ನಿನ್ನ ಮೂಗು ಬೊಟ್ಟಿನ ಅರಳು ನಾನಾಗಿರುವೆ ನಿನ್ನ ಕಿವಿ ಜುಮುಕಿಗಳ ನಾದವಾಗಿನ ನಾ ಹೊಮ್ಮಿರುವೆ ಮನಸ್ಸಿಂದು ಹೇಳುತಿದೆ ನಿನ್ನವಳು ನಿನಗೆ ಸ್ವಂತವೆಂದು ಆ ಕಿವಿ ಕೆನ್ನೆ ತುಟಿ ಗಲ್ಲವ ಸೊಂಪಾಗಿ ಸೋಕಿಸಿ ಸೋಲಿಸಿ ನಾಟ್ಯವಾಡುತಿದೆ ಆ ನಿನ್ನ ಉರುಳಿಯ ಮುಂಗುರುಳು ನನ್ನ ನೋಡಿ ತಡ ಮಾಡಬೇಡ ಕಿರುನಗೆಯ ಹೊಮ್ಮಿಸು ಮನಸ್ಸಿಂದು ಕನವರಿಸುತಿದೇ ನಿನ್ನ ಮನದಲ್ಲೇ ನೆನೆದು

----------------------------------

Reg ID: BF25-5397

Please Note - You can vote only Once. If you have already voted - the voting will be disabled automatically by the system.

1
Votes
115
Views
10 Months
Since posted

VOTING Closed on Nov 30, 2025!

Scroll to Top