ಅವಳು ಮತ್ತು ನಿಸರ್ಗ
Submitted By: Sharanu Kumbhar
----------------------------------
ಮುಂಜಾನೆ ಮೂಡಣದಿ ಹೊಂಗಿರಣ ಚೆಲ್ಲಿದಂತೆ ನಿನ್ನ ಮುಗುಳು ನಗೆ ಬೆಳಕಾಗಿ ಹೊಳೆಯುತ್ತಿದೆ ಮೃದುವಾದ ತಂಗಾಳಿ ಬೀಸುವಾಗ ಮಧುರತೆಯೇ ತುಂಬಿದ ನಿನ್ನ ಪಿಸುಮಾತೆನಗೆ ಕೇಳಿಸುತ್ತಿದೆ॥ ಮುಂಗಾರು ಮಳೆಯ ಮೊದಲ ತುಂತುರು ಹನಿಯ ಹಾಸಿನಲ್ಲಿ ನಿನ್ನ ಸ್ಪರ್ಶದ ಭಾವ ತುಳುಕುತ್ತಿದೆ ಹೂವಿನ ಪರಿಮಳವೇ ತುಂಬಿದ ಹೂದೋಟಗಳಲ್ಲಿ ಮಧುರವಾದ ನಿನ್ನ ನೆನಪಿನ ಸವಿಜೇನು ಅಡಗಿದೆ॥ ಜುಳು ಜುಳು ಹರಿಯುವ ನದಿಯ ಶಬ್ದದ ನಾದದಲಿ ಆವರಿಸಿದೆ ಇಂಪಾದ ನಿನ್ನ ಪ್ರೀತಿಯ ಸಂಗೀತವು ನೀಲಿಯಾಗಸದ ಅನಂತದಲ್ಲಿ ಮಿನುಗುವ ತಾರೆಗಳ ನಡುವೆ ನಿನ್ನ ಪ್ರಿತಿಯೇ ಶಾಶ್ವತವಾದ ಸ್ಪರ್ಗವು ॥ ಜಗದ ಈ ಬಾಳ ಪಥದಲಿ ನೀನೇ ನನ್ನ ನಿಸರ್ಗವು ನನ್ನೀ ಹೃದಯದ ಪ್ರತಿಯೊಂದು ಉಸಿರಿನ ಜೀವವು ಜನ್ಮಗಳು ಎಷ್ಟು ಬದಲಾದರೂ ನೀನು ನನ್ನ ಶ್ವಾಸ, ನನ್ನ ಜೀವ, ನೀನು ನನ್ನ ಪ್ರೀತಿಯ ಪರಮಾರ್ಥವು॥
----------------------------------
Reg ID: BF25-5392
Please Note - You can vote only Once. If you have already voted - the voting will be disabled automatically by the system.