Submission 2685

ಸ್ನೇಹದ ಮಳೆ

Submitted By: Nirikshitha

----------------------------------

ಮಳೆ ಬರುವ ಶಬ್ದವೇ ಸಂಗೀತ ನಾದದಂತೆ ಮನದಾಳದ ನೆನಪುಗಳ ತಂತಿಯ ಮೀಟಿದೆ ಪ್ರತಿ ಮಳೆಯ ಹನಿ-ಹನಿಯೂ ಧರೆಗೆ ಇಳಿದು ನಮ್ಮ ಈ ಸುಂದರ ಸ್ನೇಹದ ಮುಖಪುಟ ತೆರೆದಿದೆ ಬಿರುಸಾಗಿ ಸುರಿಯುವ ಗಾಳಿ ಮಳೆಯಲ್ಲಿ ಹೆಜ್ಜೆಗಳು ಸಾಗುತ್ತಿದೆ ಕೊಡೆಯ ಅಡಿಯಲ್ಲಿ ಗೆಳತಿಯರ ಬಳಗದ ನಗುವಿನ ಶಬ್ದದಲ್ಲಿ ಹಾಯಾಗಿ ಬೀಸುವ ಗಾಳಿಯ ಸ್ಪರ್ಶದಲ್ಲಿ ಒದ್ದೆಯಾದ ರಸ್ತೆಗಳು ನಮ್ಮ ಹೆಜ್ಜೆಗುರುತುಗಳು ಸಾಗಿದ ಹಾದಿಯ ನಡುವೆ ನೂರೊಂದು ಮಾತುಗಳು ಮಳೆಯ ಸುಗಂಧವು ಮಣ್ಣಿನಲ್ಲಿ ಬೆರತಿದೆ ಆ ದೂರ ನಿಲ್ದಾಣಕ್ಕೆ ಪಯಣವು ತಲುಪಬೇಕಿದೆ

----------------------------------

Reg ID: BF25-5389

Please Note - You can vote only Once. If you have already voted - the voting will be disabled automatically by the system.

4
Votes
133
Views
11 Months
Since posted

VOTING Closed on Nov 30, 2025!

Scroll to Top