ಮುತ್ತಾಗಿ ಜನಿಸಿದ ಪ್ರೇಮ
Submitted By: Anuroopa Arali
----------------------------------
ತನ್ನೊಡಲ ತಾರೆ ಚೆಲ್ಲಿ ಭುವಿಯನ್ನ ಶೃಂಗರಿಸುವಾಸೆ ಸ್ವಾತಿಮುತ್ತಿನ ಮಳೆ ಸುರಿಸಿ ಅದರಲ್ಲಿ ಎಳೆಪ್ರೇಮವ ಮುಚ್ಚಿಟ್ಟಿತು. ಮೌನದಿ ಮುತ್ತಿಕ್ಕಿ ಪ್ರೀತಿಯ ನಿವೇದಿಸಿತು. ಭುವಿಗೆ ಮುಗಿಲ ಮಡಿಲಲಿ ಮಲಗಿ ನಲಿಯುವ ನಕ್ಷತ್ರ ಎಣಿಸುವಾಸೆ ಕಡಲಾಳದಿ ತಿಳಿಪ್ರೇಮವ ಚಿಪ್ಪಿನೊಳಗೆ ಬಚ್ಚಿಟ್ಟಿತು. ಅದೇ ಮಿಂಚಿನ ಓಟ ಅದೇ ಅಲೆಗಳ ಅಬ್ಬರ ಮಧ್ಯ ಭಾವನೆಗಳ ಬಂಧ ಬಿಗಿಯಾಗಿತ್ತು ನಿಷ್ಕಲ್ಮಶ ಪ್ರೀತಿಗೆ ಗೆಲುವಾಗಿ ಮುತ್ತೇ ಕಡಲೊಡಲಲಿ ಜನಿಸಿತ್ತು ರಂಗೇರಿದ ಬಾನಿಗೆ ಕಿರಣವೇ ಅಲ್ಲಿ ಸಾಕ್ಷಿಯಾಗಿತ್ತು.
----------------------------------
Reg ID: BF25-5382
Please Note - You can vote only Once. If you have already voted - the voting will be disabled automatically by the system.