Submission 2590

ಅವಳಿಗೆ ಕಾಡು ಮಲ್ಲಿಗೆಯಲ್ಲ.

Submitted By: Manjula Shankar Hudali

----------------------------------

ಅದೇನು ಕಾಡು ಮಲ್ಲಿಗೆಯ ಹೂವಲ್ಲ , ಊರ ಬೀದಿಯಲ್ಲಿ ಮೈ ಚಾಚಿ ಮಲಗಿದ ಬಳ್ಳಿಯ ಹೂ, ಹಾದಿ ಹೋಕರೆಲ್ಲ ಕೈ ಮಾಡಿದರೆ ಸಿಗುವ ಸಹಜ ಹೂ, ಕಂಡ ಕಂಡವರೆಲ್ಲ ವಾಸನೆಯ ಸವಿದು, ದುಂಬಿಗಳೆಲ್ಲ ಮಕರಂದ ಹಿರಿದ ಸಪ್ಪೆ ಹೂ, ಬಿಸಿಲ ಬೇಗೆಗೆ ಬಾಡಬಾರದೆಂದು ಎಲೆಯ ಮರೆಯಲ್ಲಿ ಅವಚಿಕೊಂಡ ಹೂ, ಮಳೆಬಂದರೆ ಎಲ್ಲಿ ನಾ ಮಳೆಹನಿಗಳ ರಬಸಕ್ಕೆ ಉದುರಿ ಬೀಳುವೆನೇನೋ ಎಂಬ ದುಗುಡದಿಂದ ಗಟ್ಟಿಗಿತ್ತಿಯಂತೆ ಬೇರುರಿದ ಹೂ, ಇನ್ನು ಯಾರಾರು ನನ್ನೇನು ಮಾಡಿಯಾರು ಎಂಬ ಭಯದಲಿ ಸಂಜೆಯಾಗುವುದನ್ನೇ ಕಾಯುತ್ತಿರುವ ಮಲ್ಲಿಗೆಯ ಹೂ, ಅದು ನಿಜಕ್ಕೂ ಮಲ್ಲಿಗೆಯ ಹೂವೇ? ಅಲ್ಲ ಅದು ಹೂವಲ್ಲ!,, ಮಲ್ಲಿಗೆ.. ಅವಳ ಹೆಸರು.. ಅವಳಿಗೆ ಕಾಡ ಬಿಟ್ಟು, ರಾಕ್ಷಸರಿರುವ ನಾಡ ಸೇರಿದವಳು, ಒಮ್ಮೆ ತಂದೆ, ಅಣ್ಣ ತಮ್ಮ ಎಂಬವರ ತೊಳ ಬಳಗಳ ರಕ್ಷಣೆಯಲ್ಲಿ ಇದ್ದವಳು, ಈಗ ಪುರುಷರ ಆಸ್ತಿಯಾಗಿಹಳು, ಅವಳಲ್ಲಿಗ ಸುಮದುರ ವಾಸನೆ, ಸಿಹಿ ಮಕರಂದ ಯಾವುದು ಉಳಿಯಲು ಅವರು ಬಿಟ್ಟಿಲ್ಲ, ಮಳೆ ಬಿಸಿಲ ಭಯ ಅವಳಲ್ಲಿಗಿಲ್ಲ, ಚಿಗುರೋಡೆದು ಬೇರುರಿ ದೃಢವಾಗಿ ನಿಲ್ಲಬೇಕೆಂಬ ಹುಮ್ಮಸ್ಸು ಅವಳಿಗೆ ಬೇಕಾಗಿಲ್ಲ, ಅವಳೇನಿದ್ದರೂ ಸಂಜೆಯಾಗುವುದರೊಳಗೆ ಬಾಡಿ, ಉದುರಿ ಮಣ್ಣಿಗೆ ಸೇರಬೇಕೆಂದು ಬಯಸುತ್ತಿರವಳು, ಯಾಕೆಂದರೆ ಅವಳು ಅತ್ಯಾಚಾರ ಎಂಬ ನರಕದಲ್ಲಿ ಬಾಡಿದರು, ಮತ್ತೆ ಅರಳಲು ಬಯಸಿದವಳು ಆದರೂ ಅವಳಿಗೆ ಕಾಡು ಮಲ್ಲಿಗೆಯಲ್ಲ..

----------------------------------

Reg ID: BF25-5342

Please Note - You can vote only Once. If you have already voted - the voting will be disabled automatically by the system.

45
Votes
287
Views
11 Months
Since posted

VOTING Closed on Nov 30, 2025!

Scroll to Top