ಅಪ್ಪನ ಹೆಸರು
Submitted By: Shridevi garag
----------------------------------
ಕೋಪದಲ್ಲೂ ಪ್ರೀತಿ ತೋರೋ ಕರುಣಾಮಯಿ ಇವರು ನಾ ಹೇಳದೆ ನನ್ನ ಮನಸ್ಸು ಅರಿತ ಸ್ನೇಹಿತರಿವರು ಕೇಳದೆ ಎಲ್ಲವನ್ನೂ ನೀಡಿದರಿವರು, ಕಷ್ಟವೇನೆಂದು ನಮಗೆ ತೋರಿಸಿದವರು, ತನಗೆ ನೋವಾದರೂ ಮರೆಮಾಚಿದವರು, ನನ್ನೆಲ್ಲ ಕಲ್ಪನೆಗೂ ರೆಕ್ಕೆ ಕೊಟ್ಟವರು, ನಾ ನಡೆವ ದಾರಿಲಿ ಮುಳ್ಳುಗಳಿಗೆ ಅವಕಾಶವೇ ನೀಡದವರು, ಬದುಕಿಗೆ ಬೆಳಕಾಗಿ ನಿಂತ ಗುರು ಇವರು, ನನ್ನ ಕಾವಲುಗಾರನಾಗಿ, ನನಗೆ ನೆರಳಾಗಿ. ನನ್ನ ಬೆನ್ನೆಲುಬಾಗಿ, ನಮಗಾಗಿಯೇ ಜೀವನವನ್ನು ತೆಯುವವರು, ತನಗಾಗಿ ಏನನ್ನು ಬಯಸದವರು, ನನ್ನ ಬದುಕಿಗೆ ದೈವವೇ ಇವರು ಎಲ್ಲದಕ್ಕಿಂತ ಮಿಗಿಲು ನನ್ನ ಆತ್ಮ ಸ್ಥೈರ್ಯ, ಧೈರ್ಯ ಇವರು, ನನ್ನ ಅಮ್ಮೂಲ್ಯ ರತ್ನ ಇವರು, ಜೀವನವೇನೆಂದು ಕಲಿಸಿ ಕೊಟ್ಟರಿವರು, ಆದರೆ ಇವರಿಲ್ಲದ ಜೀವನ ನಡೆಸಲು ಕಲಿಸಲಿಲ್ಲ ಇವರು, ಹೆಸರಿನಲ್ಲಿ ರಘು ಅದೇ ರೀತಿ ಮನಸ್ಸು ಪೂರ್ತಿ ಮಗುವಾಗಿದ್ದರು, ದೇವರಾಗಿದ್ದರು, ಅಪ್ಪನೆಂದರೆ ಜಗತ್ತು, ಅಪ್ಪಾ ಸದಾ ನಿಮ್ಮ ನೆನಪಲ್ಲಿ ಕಣ್ಣಂಚಿನ ಹನಿ ನೀರು ಸಾಂತ್ವನ ಹೇಳುತ್ತಿವೆ
----------------------------------
Reg ID: BF25-5340
Please Note - You can vote only Once. If you have already voted - the voting will be disabled automatically by the system.