ನಮ್ಮ ದೇಶ ಭಾರತ
Submitted By: SANDHYA SHANBHAG
----------------------------------
ಭಾರತ ಇದುವೇ ನಮ್ಮ ದೇಶ ಸೌಹಾರ್ದತೆಯ ಆದೇಶ ಸಮತೆಯ ನಿರ್ದೇಶ ಒಗ್ಗಟ್ಟಿನ ಮಂತ್ರ ಜಪಿಸೋಣ ಮುಗ್ಗಟ್ಟಿಗೆ ಪಾಠ ಕಲಿಸೋಣ ಕುಗ್ಗದೆ ಬಗ್ಗದೆ ಬಗ್ಗು ಬಡಿಯೋಣ. ಹಲವೆನ್ನದೆ ಮುನ್ನಡೆದು ಕೋಲಾಹಕವ ತಡೆದು ವಿಶ್ವಪಥಕೆ ಹಾತೊರೆದು. ಮಾನವೀಯತೆಗೆ ಮಾದರಿ ಭಿನ್ನತೆಗೆ ಒಳಗೊಳ್ಳದಿರಿ ಸರ್ವ ಜನಾಂಗದ ಶಾಂತಿಯ ತೋಟದ ಸುಂದರಿ. ಶಾಂತ ಚಿತ್ತ ಹರಿಯಲಿ ಅಹಿಂಸೆಯ ತತ್ವ ಸಾರಲಿ ಬಹುತ್ವದಿ ಏಕತೆ ಮೂಡಲಿ. ಜೀವಕೆ ಜೀವನ ಧಾತೆಯೇ ಪ್ರಕೃತಿ ಸಂಸ್ಕೃತಿ ಮಾತೆಯೇ ಸನ್ಮತಿ ಸದ್ಗತಿ ನೀತೆಯೇ.
----------------------------------
Reg ID: BF25-5315
Please Note - You can vote only Once. If you have already voted - the voting will be disabled automatically by the system.