Submission 2502

ಕನಸು ನನಸಾಗದ ಬದುಕು

Submitted By: ಸವಿತಾ.ಪ.ಚರಂತಿಮಠ

----------------------------------

ಗರ್ಭದಲ್ಲಿ ಇದ್ದಾಗ ತಾಯಿಗೆ ತವಕವಾ ತಂದಳು ಗರ್ಭದಿಂದ ಆಚೆಗೆ ಬಂದಾಗ ಹೆಣ್ಣೇ ಎಂಬ ತಾತ್ಸಾರ ಆದಳು ಬೆಳೆದಳು ತಾಯಿಗೆ ತಾಯಿ, ಬೆಳೆದಳು ತಂದೆಗೆ ಹೆಗಲಾಗಿ ಅಣ್ಣತಮ್ಮಂದಿರಿಗೆ ಬೆನ್ನು ತಟ್ಟಿ ನಿಂತಳು ಯೌವ್ವನ ವಯಸ್ಸು ಮನಸ್ಸಲ್ಲಿ ನೂರೆಂಟು ಕನಸು ಕನಸು ಕಮರಿತು ಮನಸ್ಸು ಕುಗ್ಗಿತು ಕೊರಳು ಬಾಗಿತು ಬಾಗಿದ ಕೊರಳಿಗೆ ಕರಿಮಣಿ ಏರಿತು ಯಾರದೋ ಒತ್ತಾಸೆಗೆ ಬದುಕು ಬಲಿಯಾಯಿತು ಹೆಣ್ಣು ಹೆಣ್ಣೇ ಎಂಬ ಶಬ್ದವಾಗಿ ಉಳಿಯಿತು ಮಗು ವಯಸ್ಸಿಗೆ ಮಗುವಾಗುವ ಹೊತ್ತಾಯಿತು ಒಂದು ಹೆಣ್ಣು ಇನ್ನೊಂದು ಜೀವಕ್ಕೆ ಜೀವವಿತ್ತಿತ್ತು ಹೆಣ್ಣು ಹೆಣ್ಣೇ ಎಂಬ ಶಬ್ದವಾಗಿ ಉಳಿಯಿತು ಕೊನೆಗೂ ತಾ ಕಂಡ ಕನಸು ನನಸಾಗಲಿಲ್ಲ ಭರವಸೆಗಳ ಹಾದಿ ಅವಳ ಪಾಲಿಗೆ ಉಳಿಯಿತ್ತಲ್ಲ ಕನಸು ನನಸಾಗಲಿಲ್ಲ.

----------------------------------

Reg ID: BF25-5297

Please Note - You can vote only Once. If you have already voted - the voting will be disabled automatically by the system.

23
Votes
282
Views
10 Months
Since posted

VOTING Closed on Nov 30, 2025!

Scroll to Top