ನೆನೆಪಿನ ನವಿಲು ಗರಿ
Submitted By: Manjula murali
----------------------------------
ನೆನಪಿದೆಯಾ ಮೊದಲ ಭೇಟಿ ತಂಪ್ಬೆಳಕಲ್ಲಿ ನೀ ನನ್ನ ನೋಡಿದ ಘಳಿಗೆ ಹೃದಯದಲಿ ಭಾವಗಳನ್ನು ಮೀಟಿ ಅಗುಂತಕನಾಗಿ ಬಂದರೂ ಬೆಳೆಯಿತು ಸಲಿಗೆ ಅಂದು ನೀ ಕೊಟ್ಟ ನೆನಪಿನ ಉಡುಗೊರೆ ನವಿಲು ಗರಿಯೊಂದು ಇಂದು ನಿನ್ನನ್ನೇ ನೆನಪಿಸಿದೆ ಕಣ್ಣಿಗೆ ಕಾಣದ ಭಾವವೊಂದು ತುಟಿಗಳನ್ನು ಅರಳಿಸಿರೆ ಸಂತಸದ ಹಾದಿಯಲೊಮ್ಮೆ ಹೋಗಿ ನಿಂತತಾಗಿದೆ ಮೋಹದ ಪಾಶದಲ್ಲಿ ಸಿಲುಕಿದೆ ಹೃದಯ ನಿನ್ನಲ್ಲಿಯೇ ಸಂತೋಷವ ಹುಡುಕುವ ತವಕವೂ ಇಂದಿಗೂ ಬೆರತಂತೆ ಆಗಿದೆ ತನು ಮನವೂ ಇನಿಯ ಸನಿಹ ನೀನಿರಲು ಮೊಗ್ಗೊಂದು ಹೂವಾಂತಾಯ್ತು ಹರೆಯ ನೀ ಸುಳಿಯದ ಅಲೋಚನೆ ಇರದು ನಾ ನಿನ್ನ ನೆನಪಿಸದ ಭಾವವಿರದು ಹೃದಯದಲ್ಲಿ ಬಂದೊಮ್ಮೆ ಸಂಭಾಷಿಸು ಕಂಗಳಲ್ಲಿಯಾದರೂ ನೀನಿರದೆ ಜೀವನ ಯೋಚಸಲೂ ಕೂಡ ಬಾರದು
----------------------------------
Reg ID: BF25-5257
Please Note - You can vote only Once. If you have already voted - the voting will be disabled automatically by the system.