Submission 2418

ಅಮರ

Submitted By: Abhinandan. M

----------------------------------

ಆಧ್ಯಾತ್ಮಿಕತೆಯ ಅನವರತ ಸಾಧಕ ಪುಟ್ಟರಾಜ ಗವಾಯಿ ಎಂಬ ಆದರ್ಶ ಚಿಂತಕ ಸಂಗೀತದಲ್ಲಿ ಮಹಾ ದಿಗ್ಗಜ ರೆನಿಸಿ ವೀರೇಶ್ವರ ಪುಣ್ಯಶ್ರಮವ ವಿಸ್ತರಿಸಿ ಸಾಹಿತ್ಯ- ಸಂಗೀತದಲ್ಲಿ ಪ್ರಭುತ್ವ ಸಾಧಿಸಿದಿರಿ. ಅಂಧ- ಅನಾಥರ ಕಣ್ಮಣಿ, ನಟ ರಾಜ್ ರವರಿಗೆ ಸಂಗೀತ ಕಲಿಸಿ, ಸಂಗೀತವನ್ನೇ ಬದುಕಿನ- ಉಸಿರಾಗಿಸಿ, ಸರಳ ಬದುಕಿನ, ಸಮಾಜದ ಏಳಿಗೆಯ ಚಿಂತನೆಯಲ್ಲಿ ಸಕಲರಲ್ಲೂ ದೇವರನ್ನು ಕಂಡವರು..! ಸಮಾಜಕ್ಕೆ -ಬೇಡವಾದವರು ಪುಣ್ಯಶ್ರಮದಲ್ಲಿ ಸಾಧಕರಾದರು.. ಸಾಮಾನ್ಯರು - ಅಸಮಾನ್ಯರಾಗಿ, ಕೀರ್ತಿ ಬೆಳಗಿದರೂ, ನಗುವಿನ ಒಳಗಣ್ಣಿನಲ್ಲಿ, ಎಲ್ಲವನ್ನು ಕಂಡು ಎಂದಿಗೂ ಅಮರವಾದಿರಿ.!

----------------------------------

Reg ID: BF25-5252

Please Note - You can vote only Once. If you have already voted - the voting will be disabled automatically by the system.

0
Votes
129
Views
10 Months
Since posted

VOTING Closed on Nov 30, 2025!

Scroll to Top