Submission 2340

ಕರುಳು ಕೂಗುತಿದೆ

Submitted By: ಮುತ್ತುರಾಮ ನಾಯಕ

----------------------------------

ಎದೆಯಲಿ ನೋವು ತುಂಬಿ, ಕಣ್ಣೀರು ಸಾಗರವಾಗಿ, ಮಗುವೇ.... ನಿನ್ನ ನೆನೆದು, ಮನವು ಭಾರವಾಗಿದೆ. ನಿನ್ನ ಮುದ್ದಾದ ಮುಖವು, ಕನಸಿನಲಿ ಮೂಡಿತ್ತು, ಅಮ್ಮನ ಮಡಿಲು ಸೇರದೆ ಭೂಮಿ ಅಡಿಯಲ್ಲಿ ಸೇರಿದೆ ನಿನ್ನ ಕೈಹಿಡಿದು ಮುದ್ದಿಸಿ ಆಡಿಸುವ ಆಸೆಯಾಗಿಯೇ ಉಳಿಯಿತು ಮಾತಾಡದೇ ನಿನ್ನ ನಗು, ಕೇಳದೆ ಹೃದಯವೇ ಚೂರಾಗಿಸಿದೆ. ಅರಳದ ಹೂವಿನಂತೆ, ನೆನಪಾಗಿ ನೀ ಉಳಿದೆಯೆ, ಅಮ್ಮನ ಹೃದಯವನ್ನು, ಶಾಶ್ವತ ಭಾರವಾಗಿದೆ ಎದೆಯಲಿ ನೋವು ತುಂಬಿ, ಕಣ್ಣೀರು ಸಾಗರವಾಗಿ, ಮಗುವೇ ನಿನ್ನ ನೆನೆದು, ಮನವು ಭಾರವಾಗಿದೆ

----------------------------------

Reg ID: BF25-5237

Please Note - You can vote only Once. If you have already voted - the voting will be disabled automatically by the system.

2
Votes
133
Views
1 Year
Since posted

VOTING Closed on Nov 30, 2025!

Scroll to Top