Submission 2255

ನನ್ನೊಳಗಿನ ನಾನು

Submitted By: Sripad Algudkar

----------------------------------

ಮನದಾಳದ ಭಾವನೆಯ ಕಡಲಲಿ ಮುಳುಗಿರುವೆ ಎದೆಯಾಳದ ಅಂತರಂಗ ಹುಡುಕಿ ಹೋಗುತ್ತಿರುವೆ ಮುಸ್ಸಂಜೆಯ ಪಡುವಣದ ರಂಗಿನಲಿ ಸೋಕಿರುವೆ ಬರಡಾದ ಮರದಂತೆ ನನ್ನೊಳಗಿನ ನಾನಾಗಿರುವೆ ಸಂಸಾರ ಸಾಗರದ ನೆಲೆಯಲ್ಲಿ ಅವಿತಿರುವೆ ಮುಕ್ತವಾಗಿ ಮಾತುಗಳ ಹಂಚುವುದು ಮರೆತಿರುವೆ ಏಳಿಗೆಯ ಪೀಳಿಗೆಯ ಬೆನ್ನುಹತ್ತಿ ಹೋಗಿರುವೆ ನನ್ನೊಳಗಿನ ನಾನಾಗಲು ಶತಪ್ರಯತ್ನ ಮಾಡಿರುವೆ ಬದುಕಿನ ನೆಲೆಯನು ಹುಡುಕುತ್ತಾ ಹೊರಟಿರುವೆ ರಂಗೇರಿದ ಬಾನಿನಲಿ ಹೊಸಕಳೆಯ ಹುಡುಕಿರುವೆ ಮುಸ್ಸಂಜೆಯ ಬದುಕಿಗೆ ಆಶಾಕಿರಣ ಮೂಡಿಸಿರುವೆ ನನ್ನೊಳಗಿನ ನಾನಾಗಿ ಹೊಸಬೆಳಕು ತೋರಿಸಿರುವೆ ಕರಾಳ ರಾತ್ರಿಗಳ ನಿದ್ದೆಯಿಲ್ಲದೆ ಹೊರಳಾಡಿರುವೆ ನನ್ನನ್ನೇ ಅರಿಯದೇ ಇನ್ನೊಬ್ಬರಿಗಾಗಿ ಜೀವಿಸಿರುವೆ ನನ್ನೊಳಗಿನ ನಾನಾಗಲು ಹೊಸ ದಿಗಂತಕ್ಕೆ ಸಾಗಿರುವೆ

----------------------------------

Reg ID: BF25-5219

Please Note - You can vote only Once. If you have already voted - the voting will be disabled automatically by the system.

35
Votes
232
Views
10 Months
Since posted

VOTING Closed on Nov 30, 2025!

Scroll to Top