ಅನಾಥನ ಕೊರತೆ
Submitted By: Shammeem Navarang Haleyangadi
----------------------------------
ಎದೆಯಲಿತ್ತೊಂದು ಕೊರತೆ. ಜನ್ಮವೆತ್ತಾಗ ಸಹೋದರಿಯೊಂದರ. ಮನದಿ ತುಂಬಾ ವರತೆ. ಆಗಬಹುದಿತ್ತೇನೋ ಜೀವನ ಸುಂದರ. ಮನದಲಿತ್ತೊಂದು ಕೊರತೆ. ಬಾಲ್ಯದಲಿ ಬಾಲ್ಯಸ್ನೇಹಿತೆಯೊಬ್ಬಳ. ಆಗಬಹುದಿತ್ತೇನೋ ಜೀವನದ ಸುಖ ದುಃಖ ಹಂಚುವ ಹಂಬಲ. ದುಗುಡದಾಗೊಂದು ಕೊರತೆ. ಮದುವೆ ದಿನದಿ ಅಜ್ಜಿಯ ಹಾರೈಕೆಯ. ಬಂದವರ ಮುಂದೆ ನಿಂತು ಹರಟಲು ತನ್ನ ಮೊಮ್ಮಗನ ಬಗೆಗಿನ ಓಲೈಕೆಯ. ಶುಭ ಸುದ್ದಿಯಲೊಂದು ಕೊರತೆ. ಗಂಡು ಮಗುವಿನ ಗಳಿಗೆಯಲಿ ಆಪ್ತರ ಸಂತಾನದ ಸಂತೋಷದಿ ಹಂಚಲು.
----------------------------------
Reg ID: BF25-5205
Please Note - You can vote only Once. If you have already voted - the voting will be disabled automatically by the system.