Submission 2200

ಅವಳೊಂದು ಹಣತೆ

Submitted By: Kavitha MR

----------------------------------

ಅವಳೊಂದು ಹಣತೆಯಾಗಿ ಉರಿಯುತ್ತಿದ್ದಾಳೆ, ಬೆಳಗುತ್ತಿದ್ದಾಳೆ ಮನೆ, ಮಡದಿಯಾಗಿ, ತಾಯಿಯಾಗಿ, ತನಗಾಗಿ ಅಲ್ಲ ತನ್ನವರಿಗಾಗಿ, ತನ್ನವರೆಂದುಕೊಂಡವರಿಗಾಗಿ ಉರಿಯುತ್ತಿದ್ದಾಳೆ, ಉರಿದುರಿದು ಕರಿಗಟ್ಟಿದ್ದಾಳೆ, ಮಸಿ ಹಿಡಿದಿದ್ದಾಳೆ, ತಿಕ್ಕಿ ತೊಳೆಯುವವರಿಲ್ಲ, ಸ್ವಚ್ಛ ಮಾಡುವವರಿಲ್ಲ, ಆದರೂ ಉರಿಯುತ್ತಿದ್ದಾಳೆ,ಎಲ್ಲಿಂದಲೋ ಬಂದು ಈ ಮನೆಯ ಸೇರಿದ್ದಾಳೆ, ಆದರೂ ಇದು ನನ್ನ ಮನೆ, ನನ್ನ ಸಂಸಾರ ಎಂದು ಬೆಳಗುತ್ತಿದ್ದಾಳೆ, ತನ್ನ ಬಾಲ್ಯ ಯೌವ್ವನದ ಕನಸ ಮೂಟೆ ಕಟ್ಟಿ ಇಟ್ಟಿದ್ದಾಳೆ, ತನ್ನ ಗಂಡ ಮಕ್ಕಳ ಕನಸುಗಳಿಗಾಗಿಉರಿಯುತ್ತಿದ್ದಾಳೆ, ನಿತ್ಯ ಹೊಸ ಕಸುವು ಹೊಂದಿಸಿಕೊಂಡು ಉರಿಯುತ್ತಿದ್ದಾಳೆ, ತನ್ನ ಹೆಸರಿಗಾಗಿ ಅಲ್ಲ ತನ್ನ ಕರುಳಿಗಾಗಿ ಮಿಡಿಯುತ್ತಿದ್ದಾಳೆ, ಉರಿಯುತ್ತಿದ್ದಾಳೆ ಅವಳು, ಬೆಳಗುವುದೇ ತನ್ನ ಕಾಯಕವೆಂದು ಅರಿತ್ತಿದ್ದಾಳೆ.

----------------------------------

Reg ID: BF25-5203

Please Note - You can vote only Once. If you have already voted - the voting will be disabled automatically by the system.

4
Votes
117
Views
10 Months
Since posted

VOTING Closed on Nov 30, 2025!

Scroll to Top