Submission 2185

ಧೈರ್ಯದ ಹೆಗಲು... ಅಪ್ಪ

Submitted By: Bharati M Naik

----------------------------------

ಕಲ್ಮಶವಿಲ್ಲದ ನಿಸ್ವಾರ್ಥ ಜೀವಿ ಅಪ್ಪ ಮನಸ್ಸು ಶುದ್ಧತೆಯ ಸವಿಯಾದ ತುಪ್ಪ ಎದೆಯೊಳಗೆ ನೋವನ್ನು ನುಂಗಿದವನು ನಮ್ಮ ಮಗುವಿಗಾಗಿ ದುಡಿಯುವವನು ನಮ್ಮ ಕನಸುಗಳಿಗೆ ನೆಲೆಯಾಗಿ ನಿಂತವನು ಆ ಕನಸನು ನನಸಾಗಿಸುವ ಹಾದಿಯಲ್ಲಿ ಬೆಂಬಲವಾಗಿ ನಿಲ್ಲುವವನು ಅಪ್ಪ ಎನ್ನುವ ಪದವೇ ದೇಹದಲ್ಲಿ ಸಂಚಾರವಾಗುವ ಧೈರ್ಯದ ರಕ್ತ ಆ ಧೈರ್ಯದ ಹಾದಿಯಲ್ಲಿ ನಾವು ಗುರಿ ತಲುಪಿದಾಗ ಆ ಜೀವವು ಆಗುವುದು ಇನ್ನಷ್ಟು ಶಕ್ತ ತನ್ನ ಕಷ್ಟವ ಮರೆತು ನಮಗೆ ಸುಂದರವಾದ ಪ್ರಪಂಚವ ಸೃಷ್ಟಿಸಿದವನು ಈ ಪುಟ್ಟ ಪ್ರಪಂಚದಲ್ಲಿ ಸಂತಸದ ಅರಮನೆಯ ಕಟ್ಟಿದವನು ನಮ್ಮ ಆಸೆಗಳನ್ನು ಖುಷಿಯಲ್ಲಿ ಈಡೇರಿಸುವ ಬಾಳಿನ ನಿರ್ದೇಶಕ ಇವರೇ.. ನನ್ನ ಜೀವನದ ಅವಿಭಾಜ್ಯ ಅಂಗವಾಗಿರುವ ಸುಂದರವಾದ ನಾಯಕ

----------------------------------

Reg ID: BF25-5202

Please Note - You can vote only Once. If you have already voted - the voting will be disabled automatically by the system.

52
Votes
388
Views
10 Months
Since posted

VOTING Closed on Nov 30, 2025!

Scroll to Top