ಗೊಂಬೆಯಂತೆ ಅಪ್ಪ
Submitted By: ದ್ಯಾವಪ್ಪ ಮ. ಮಾದರ
----------------------------------
ಬಡತನದ ಹೊಲದ ನಡುವೆ ಬೆಳೆಗಾಗಿ ಮುಡಿಪು ಬದುಕು; ಬಿಸಿಲು ಮಳೆ ಗಾಳಿ ಚಳಿ ಲೆಕ್ಕಿಸದೆ ಬೇಲಿಯಲ್ಲಿ ನಿಂತು ಕಾಯ್ವ ಬೆದರು ಗೊಂಬೆಯಂತೆ ಅಪ್ಪ ಹರುಕು ಬಟ್ಟೆ ಬಿದಿರು ದೇಹ ಹೆಗಲ ಮೇಲೆ ಆಶಾ ಮೂಟೆ ಹಗಲು-ರಾತ್ರಿ ಭವಿಷ್ಯದ್ದೇ ತುಡಿತ ಹಾರೈಕೆಗೆ ಸದಾ ಸಿದ್ಧವೆನ್ನುವ ಹೆದರು ಗೊಂಬೆಯಂತೆ ಅಪ್ಪ ಸರಿದು ಹೋದ ಫಸಲದಿಂದ ಸೂರಿನಡಿಗೆ ಅವಿತು ಕುಳಿತು ಸಾರವ ಅರಿಸಿ ಚೂರು ತಾ ಬೆರೆಸಿ ಸಂಸಾರಕ್ಕಾಗಿ ದುಡಿಯುವ ಸದರ ಗೊಂಬೆಯಂತೆ ಅಪ್ಪ
----------------------------------
Reg ID: BF25-5192
Please Note - You can vote only Once. If you have already voted - the voting will be disabled automatically by the system.