ಅಪ್ಪನ ಅಭಿಮಾನಿ
Submitted By: Supriya Malannavar
----------------------------------
ಅಪ್ಪನ ಅಭಿಮಾನಿ ನಾನು ನನ್ನೊಲವಿನ ಕಾವ್ಯವಾಗಿ ಸದಾ ನನ್ನೊಂದಿಗಿದ್ದವನು ಬದುಕಿನ ಅ ಆ ಇ ಈ ಕಲಿಸಿ ಬಣ್ಣದ ಕನಸುಗಳಿಗೆ ರೆಕ್ಕೆ ಕಟ್ಟಿದಾತ ಮಗಳು ಗೆದ್ದೊಡನೆ ಅವಳಂಗೈ ಗೆ ಮುತ್ತಿಟ್ಟು ಆನಂದದಿ ಕಣ್ಣೀರಿಟ್ಟ ಕ್ಷಣ ಜಗದಾವರಿಸಿತು ಬದುಕು ಕಂಡ್ಹಾಂಗ ಎನ್ನುವ ಪಾಠ ಅರ್ಥವಾಗುವ ಹೊತ್ತಿಗೆ ಅಪ್ಪನೇ ಇಲ್ಲ. ಕರಾಳ! ಕಗ್ಗತ್ತಲು!! ಅಪ್ಪ ನೀ ದೇವರಿಗಿಂತಲೂ ದೊಡ್ಡವನು
----------------------------------
Reg ID: BF25-5183
Please Note - You can vote only Once. If you have already voted - the voting will be disabled automatically by the system.