ರೈಲಿನಂತೆ ಬದುಕು...
Submitted By: ದೀನಬಂಧು ಎಸ್ ಆದಿ
----------------------------------
ಹಳಿಗಳ ಮೇಲೆ ಚಲಿಸಿದಂತೆ ನಮ್ಮ ಬದುಕು, ಕಷ್ಟ ಸುಖಗಳ ನೋಡುತ ಬದುಕು ಸಾಗಲಿ ಸೋಲು ಗೆಲುವುಗಳ ಹಾದಿಯಲಿ ಬದುಕು ಸಾಗುತಿದೆ, ತಿರುವುಗಳು ಇವೆ ಈ ದಾರಿಯಲಿ ಸಾಗಬೇಕು ಅರಿವಿನಿಂದ ಈ ಬದುಕಿಗೆ ಬೇಕು ಔಷಧಿಯಂತಿರುವ ನೆಮ್ಮದಿಯು, ಹುಡುಕಿ ಸಾಗಬೇಕು ನಾವು ಈ ನೆಮ್ಮದಿಯನು ಸೋಲದಿರಲಿ ನಿನ್ನ ಮನವು ಎಲ್ಲಿಯೂ ಗೆಳೆಯ, ಬೇರೆಯ ಜೀವಗಳಿಗೆ ಸೂರ್ಯನಂತೆ ಬೆಳಕಾಗುವ ಹಾಗೆ ಬದುಕು ನೀ ಈ ಬದುಕು ನಿಂತ ನೀರಲ್ಲ ಗೆಳೆಯ, ಸದಾ ಚಲಿಸಲಿ ನಿನ್ನ ಬದುಕಿನ ಬಂಡಿಯು ಈ ರೈಲಿನಂತೆ
----------------------------------
Reg ID: BF25-5153
Please Note - You can vote only Once. If you have already voted - the voting will be disabled automatically by the system.