ಬಿಸಿಲುಗುದುರೆ
Submitted By: Revayya Shivalinagayya Mathad
----------------------------------
ಎಂದೂ ಸಿಗದ ಬಿಸಿಲುಗುದುರೆ ಮನಸನ್ನು ಮತ್ತೆ ಮತ್ತೆ ಸೆಳೆಯುತ್ತಿದೆ .//ಪ// ಕೈಯಲ್ಲಿರೋ ರತ್ನಕ್ಕಿಂತ ಆಕಾಶದ ಚುಕ್ಕೆ ಚಂದ ಅನಿಸಿದೆ, ತಟ್ಟೆಯಲ್ಲಿರುವ ಕೈರೊಟ್ಟಿಗಿಂತ ಕನಸಿನ ಭೋಜನ ಬೇಕೆನಿಸಿದೆ //1// ಅರ್ಥವೇ ಆಗದ ಪ್ರಶ್ನೆ ಇದು, ಶತಶತಮಾನಗಳ ಸೋಜಿಗವಿದು, ತನ್ನದೆನ್ನುವುದು ಬೇಡವಾಗಿದೆ, ಬೇರೆಯವರ ಕತ್ತೆ ಬೇಕಾಗಿದೆ. //2// ಮನಸಿನಾಳದ ಬಯಕೆಯಿದು, ವ್ಯರ್ಥ ಬದುಕಿನಾ ಪ್ರಲಾಪವಿದು, ಸ್ವಾರ್ಥ ಚಿಂತನೆಯ ಮಹಿಮೆಯಿದು, ಮತಿಹೀನರ ಬದುಕಿನ ಅಂತ್ಯವಿದು //3// ಸಾಗಬೇಕು ಬದುಕು ಆಮಿಷಗಳ ತೊರೆದು, ಇರುವುದೆಲ್ಲುವುದು ದೇವನ ಕೊಡುಗೆಯೆಂದು, ಇರದುದರ ಕಡೆಗೆ ಕಣ್ಣೆತ್ತಿಯೂ ನೋಡದೆಂದು, ಅಲ್ಪ ತೃಪ್ತಿಯೇ ಮಹಾ ತೃಪ್ತಿಯೆಂದು, ಸಾರ್ಥಕವೀ ಬದುಕೆಂದು//4//
----------------------------------
Reg ID: BF25-5174
Please Note - You can vote only Once. If you have already voted - the voting will be disabled automatically by the system.