ಬದುಕು ಭಗವಂತನ ಆಟ
Submitted By: Sajjan D G
----------------------------------
ಮಾನವ ಜನ್ಮವಿದು ಸುಮ್ಮನಲ್ಲ! ಭೂಮಿಗೆ ಬಂದರೆ ತಿಳಿಯಬೇಕಲ್ಲ!!ಪ!! ಜೀವನ ಅಂದರೆ ಸುಮ್ಮನಲ್ಲ! ಸಾವು ಬದುಕಿನ ಹೋರಾಟ! ಸುಮ್ಮನೇ ಇದ್ದರೆ ನಡೆಯುವುದಿಲ್ಲ! ಭಗವಂತನ ಈ ಮೇಲಾಟ!!೧!! ಜಗದ ಜಂಜಾಟ ನೂರಾರು! ಸಂಸಾರದ ಭಾರ ತಕರಾರು! ಅರಿತು ನಡೆದರೆ ಭವ ಬಾರ! ಬದುಕು ಬಾಳ ಸುಸೂತ್ರ!!೨!! ಬದುಕು ಮಾಡಿಕೋ ಸುಂದರ! ಜೀವನ ಕಟ್ಟಿಕೋ ಬಂಧುರ! ಅಷ್ಟು ಸರಳ ಅಲ್ಲ ಜಗದಲ್ಲಿ! ಬರಿ ಕಳ್ಳ ಸುಳ್ಳರು ತುಂಬಿಹರಿಲ್ಲಿ!!೩!! ಹಡೆದವರ ಋಣವ ಮರಿಬೇಡ! ಕೀಳಾಗಿ ಅವರ ಕಾಣಬ್ಯಾಡ! ನಿನ್ನ ಪಾಲಿಗೆ ದೇವರು ನೋಡ! ತಿಳಿಯಬೇಕೋ ನೀ ಓ ಮುಢಾ!!೪!! ಹೋದ ಸಾವು ಬರುವುದು ತಪ್ಪಲ್ಲ! ಇದ ಅರಿತು ನೀ ಬಾಳಬೇಕಲ್ಲ! ಸಾವು ಬದುಕು ಜೀವನ ಎಲ್ಲ! ಮೇಲಿದ್ದ ಭಗವಂತ ಎಲ್ಲಾನು ಬಲ್ಲ!!೫!!
----------------------------------
Reg ID: BF25-5151
Please Note - You can vote only Once. If you have already voted - the voting will be disabled automatically by the system.