Submission 1985

ಮಂದಾರ.....

Submitted By: Chinniri Ashok Poojar

----------------------------------

ಮಂದಾರದ ಮೊಗ್ಗಿಂದು ಮತ್ತೆ ಮಧು ಸೂಸಿದೆ. ಮಾಧುರ್ಯದಿ ಮನ ಸೆಳೆಯಲು ಮೃದುದಳಗಳ ಚಾಚಿದೆ. ಮಧು ಮಾಸವ ಮೋಹಿಸಲು ಮುಗುಳುನಗೆ ಬೀರಿದೆ. ಮಂಕಾಗಿಹ ಮಧುಚಂದ್ರನ ಮನದಾಳದಿ ಮಿಡಿದಿದೆ. ಮುಸ್ಸಂಜೆಯ ಮಾದಕತೆ ಮತ್ತೆ ಮೈಗಂಟಿದೆ. ಮೃದು ಭಾವಕೆ ಬೆರಗಾಗುತ ಮತ್ತೆ ಮೈ ತಳೆದಿದೆ. ಮಗುವಂತಹ ಮನಸಿನ ಹೂ ಮುಂಗಾರಲಿ ಮಿಂದಿದೆ. ಮಿಡಿತದಾ ತುಡಿತದಲಿ ಮೌನದ ಮನೆ ಸೇರಿದೆ. ಮಾಮರವು ಚಿಗುರುತಲಿ ಪಿಕದ ಸಕ ಬಯಸಿದೆ. ಮುಂಗಾರಿಗೆ ಮೈ ಚಾಚಲು ಮಂತ್ರಾಕ್ಷತೆ ಮೊಳಗಿದೆ. ಮನದಾಸೆಯು ಮೂಡುತಲಿ ಮತ್ತೆ ಮುದ ನೀಡಿದೆ. ಮಂಜಾಗಿಹ ನಯನದಲಿ ಮಿಂಚಿಂದು ಮೂಡಿದೆ. ಮಂಜುಳದ ಮಂಜಿನಲಿ ಮನವಿಂದು ತಣಿದಿದೆ. ಮಾದಕತೆ ಮರಳುತಲಿ ಮೋಹನನಲಿ ಬೆರೆತಿದೆ. ಮನದಾಳದ ಮಂದಾರವು ಮತ್ತೆ ಚಿಗುರೊಡೆದಿದೆ. ಮಧು ಸೂಸಲು, ಮುದ ನೀಡಲು ಮತ್ತೆ ಮಳೆ ಜಿನುಗಿದೆ.

----------------------------------

Reg ID: BF25-5147

Please Note - You can vote only Once. If you have already voted - the voting will be disabled automatically by the system.

53
Votes
335
Views
11 Months
Since posted

VOTING Closed on Nov 30, 2025!

Scroll to Top