ಕುರುಡು ಕಂಗಳು
Submitted By: ಗಿರಿಜಾ ಅ ಪಾಟೀಲ
----------------------------------
ಈ ಕುರುಡು ಕಂಗಳೇ ಹೀಗೆ.... ಮುಸುಕಿನಲೆ ಗುದ್ದಾಡುವ ಹಾಗೇ..!! ಅರಿಯಲಾರವು ಆಂತರ್ಯದ ನೋವ.. ಇಲ್ಲವುಗಳಿಗಿಲ್ಲಿ ಯಾವುದೇ ಭಾವ..!! ಈ ಲತಾಂಗಿಯೋ ಕೋಮಲಳು ಕಷ್ಟ-ಕಾರ್ಪಣ್ಯಗಳಡಗಿಸಿ ನಗುವಳು!! ಭಾವನೆಗಳ ಸುಳಿಯಲಿ ಬಂಧಿಯಾಗಿ ನರಳುತ ಸಾಗುವಳು ಒಂಟಿಯಾಗಿ..!! ಅರಿವಿಲ್ಲದ ಕುರುಡು ಗಾವಿಲರು ಕಾರ್ಗತ್ತಲೆಯ ಕೂಪಕೆ ನೂಕುವರು!! ಕತ್ತಲಿನಲ್ಲಿ ಅವಳಳುವು ಕಾಣುವುದಿಲ್ಲ ಬೆಳಕಿನ ಭ್ರಮೆಯಲಿರುವ ಅಂಧರಿ ಗೆಲ್ಲ!! ಶತ-ಶತಮಾನಗಳಿಂದಲೂ ನಡೆದೇ ಬಂದಿದೆ ಕೊನೆ ಎಂದೆಂದು ಮನ ನೊಂದಿದೆ!!
----------------------------------
Reg ID: BF25-5145
Please Note - You can vote only Once. If you have already voted - the voting will be disabled automatically by the system.