Submission 1925

ಅವಳೊಂದು ನಿಗೂಢ ಕವಿತೆ?

Submitted By: ಪ್ರವೀಣ್ ಕುಮಾರ್ ಟಿ

----------------------------------

ಅವಳು ನಿಗೂಢ ಪ್ರೇಮ ಕವಿತೆ ನೆಪದ ಕವಿತೆ ಅಲ್ಲ ನನ್ನವಳು? ಪದೆ ಪದೆ ನೆನಪಾಗಿ ಕಾಡುವ ದೇವತೆ ನನ್ನವಳು!! ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದಳು ಆದರೆ, ಮನಸ್ಸಿಗೆ ಎಂದಿಗೂ ಬಣ್ಣ ಹಚ್ಚದೇ ಉಳಿದ ಅಪರೂಪದ ಶ್ವೇತಕಾಂತಿ ನನ್ನವಳು ತುಂಟ ಕಂಗಳಲಿ ರೇಗಿಸಿ, ನಕ್ಕು ನಲಿದಾಕೆ ಗುಳಿಕೆನ್ನೆ ರಂಗೇರಿಸಿ ಸಂಭ್ರಮ ಪಟ್ಟ ಬದುಕಿನ ಪುಟದಿ ಕನಸಿನ ಕವಿತೆಯಾಗಿಯೇ ಉಳಿದವಳು!!

----------------------------------

Reg ID: BF25-5133

Please Note - You can vote only Once. If you have already voted - the voting will be disabled automatically by the system.

1
Votes
130
Views
10 Months
Since posted

VOTING Closed on Nov 30, 2025!

Scroll to Top