ಸಂಭವಿಸು
Submitted By: suvarna kumbar
----------------------------------
ಸಂಭವಿಸು ಹೇ ಭಗವಂತ ಹಸಿವ ಪರಿಹರಿಸು ಅನ್ನವಾಗಿ ಮಾನ ಮುಚ್ಚುವ ಮತಿಯಾಗಿ ಮೌಢ್ಯತೆಯಲ್ಲಿ ಕಳೆದುಹೋಗದ ಬೆಳಕಾಗಿ ಸಂಭವಿಸು ಹೇ ಮಧುಸೂದನ ಬಣ್ಣದ ಬಯಲಿನಲ್ಲಿ ಬದುಕಾಗಿ ಹೊನ್ನಕಿರಣದ ಕಾಂತಿಯಲ್ಲಿ ಅರಿವಾಗಿ ಮೈಗೆ ಮೆತ್ತಿದ ಧೂಳ ಕೆಳೆಯುವ ಜಲವಾಗಿ ಸಂಭವಿಸು ಹೇ ಮನೋಹರ ಮೌನವಾದ ಅನಾಚಾರಕ್ಕೆ ಕಣ್ಣುಗಳಾಗಿ ಕೊಳೆತು ಕೊನೆಯಾದ ಎಷ್ಟೇಷ್ಟೋ ಸತ್ಯದಉಸಿರಾಗಿ ಕಣ್ಣಿದು ಮುಕವಾಗುವ ದೃಷ್ಟಿಗೆ ಧ್ವನಿಯಾಗಿ ಅನ್ಯಾಯವಡಗಿಸಿ ನ್ಯಾಯದ ಜ್ಯೋತಿಯಾಗಿ ಕೊನೆ ಮೊದಲಿಲದ ಜೀವನದಲ್ಲಿ ನಂಬಿಕೆಯಾಗಿ ತಪ್ಪುಒಪ್ಪುಗಳ ಲೆಕ್ಕಾಚಾರದೆ ಅಚಲಗಣಿತವಾಗಿ
----------------------------------
Reg ID: BF25-5132
Please Note - You can vote only Once. If you have already voted - the voting will be disabled automatically by the system.