Submission 1874

Kannada

Submitted By: Dr.Divakar. D

----------------------------------

ಪೂಜಿಸುವುದಾದರೆ ಪೂಜಿಸುವುದಾದರೆ ಪೂಜಿಸಿ ಬಿಡೋಣ..!! ಕಡುಕಪ್ಪ ಕಲ್ಲಿಗೆ ಪ್ರಾಣ ಪ್ರತಿಷ್ಠಾಪನಗೈದವ...! ಜೀಮನ್ಮರಣದಿ ನರಳುತ್ತಿರುವವನ ಉಸಿರನುಳಿಸಲೆಂದು...! ಭಕ್ತರು ಮೃಷ್ಟಾನ್ನ ನೈವೇದ್ಯವ ನುಂಗಿದ ಕಲ್ಲು..! ತುತ್ತು ಅನ್ನಕೂ ಕೈಯೊಡ್ಡಿದವನ ಹೊಟ್ಟೆಯ ಹಸಿವನಾರಿಸಲೆಂದು..!! ಹುಟ್ಟಿನಿಂದ ಸಾವಿನವರೆಗೂ ತುಪ್ಪದ ದೀಪ ಹಚ್ಚಿದವನ ಮನದಲಿ..! ಅಸೂಯೆ ಅಹಂಕಾರ ಅಧರ್ಮದ ಕಿಡಿ ಬದುಕಲಿ ಮೂಡದಿರಲೆಂದು..!! ಸಕಲ ಲೋಕವಾನಳುವವನಿಗೆ ಸರ್ವರಳೊ ಸಮನಾಗಿರೆಂದು..! ಮೇಲು- ಕೀಳು ಉಚ್ಚ- ನೀಚನೆಂಬ ಅಧಮರ ಅಂತ್ಯವಾಗಲೆಂದು..!! ನ್ಯಾಯ - ನೀತಿ, ಒಲವು - ಗೆಲುವು ಬರಿ ಬಾಯಿ ಮಾತಿನ ಸಕ್ಕರೆಯೆನ್ನುವ..! ಗೋಸುಂಬೆಯೆನೇ ಮೀರಿಸುವ ಕುಲಾಂತಕ ಕೀಚಕರ ಕೊನೆಯಾಗಲೆಂದು..!! ತನ್ನಂತ ಇತರರ ಅರಿಯದಿರೆ ಮೂಢ ಮೌಡ್ಯವ ಬೆನ್ನಹತ್ತಿ ಸಲಹುತಿರೆ..! ಮನದಲಿ ದ್ವೇಷಾಗ್ನಿ ಜ್ವಲಿಸುತಿರೆ ಒಡಲೊಳ ಸ್ವಾರ್ಥವೇ ತುಂಬಿರೆ..!! ಪೂಜಿಸುವುದನೆ ಮರೆತು ಬಿಡೋಣ..? ಅಂತರಂಗದಿ ಶುದ್ದವಿರದಿರೆ ದಳ್ಳುರಿ ಹೊಗೆಯಾಡುತಿರೆ..!! ಅಸೂಯೆ ಸುಡುತಿರೆ ನಾನೆಂಬ ಅಹಂ ಅಳಿಯದಿರೆ..!!

----------------------------------

Reg ID: BF25-5116

Please Note - You can vote only Once. If you have already voted - the voting will be disabled automatically by the system.

4
Votes
189
Views
11 Months
Since posted

VOTING Closed on Nov 30, 2025!

Scroll to Top