ರೈತನಿಗೆ ಹೆಣ್ಣು ಕೊಡಿ
Submitted By: ಭೀಮಸೇನ ಚಿಂಚಲಿ
----------------------------------
ಅನ್ನದಾತನಾಗಿ ಜನಿಸಿದೆ ನೋಡಿ ಹಗಲಿರುಳೆನ್ನದೆ ಕಾಯಕ ಮಾಡಿ ಮಣ್ಣಲ್ಲಿ ಮಣ್ಣಾಗಿ ನೇಗಿಲವ ಹೂಡಿ ಮಣ್ಣನು ಹೂವಿನಂತೆ ಹದವ ಮಾಡಿ ದಣ್ಣಿದು ಬರುವೆವು ಮನೆಯ ಕಡಿ || ಮಳೆಯಾದಾಗ ಬೀಜ ಬಿತ್ತನೆ ಮಾಡಿ ಕಳೆಯನ್ನು ತೆಗೆದು ಪೋಷನೆ ಮಾಡಿ ಪ್ರತಿ ದಿನವೂ ಶ್ರಮದಾನವ ಮಾಡಿ ಬಂಗಾರ ಬೆಳೆ ಬೆಳೆಯುವೆವು ನೋಡಿ ಬಡ ರೈತನಿಗೆ ನೀವು ಹೆಣ್ಣು ಕೊಡಿ || ರೈತನೆಂದು ನೀವು ನನ್ನ ಜರಿಯಬೇಡಿ ಪ್ರೀತಿಯಿಂದ ನಾವಿಬ್ಬರೂ ಜೊತೆಗೂಡಿ ಊಟ ತಿನಿಸುವೆ ಕೈತುತ್ತನು ಮಾಡಿ ಸಾಕುವೆನು ನಾನು ರಾಣಿಯಂತೆ ನೋಡಿ ಈ ಜೋಪಡಿಯ ತೊರೆದು ಹೋಗಬೇಡಿ ||
----------------------------------
Reg ID: BF25-5117
Please Note - You can vote only Once. If you have already voted - the voting will be disabled automatically by the system.