Submission 1844

ಶ್ರೀ ಗಣೇಶ

Submitted By: Anithajagadish

----------------------------------

ಪಾರ್ವತಿ ಸುತನೆ ನಿನ್ನಯ ನಾನು ನಂಬಿ ಬಂದಿಹೆನು l ನನ್ನಯ ಭಯವ ನೀಗಿಸಿ ಹರಸು ಶ್ರೀ ಗಣೇಶನೇ ll ಬರುವ ವಿಘ್ನಗಳ ಕಳೆವ ವಿಘ್ನ ವಿನಾಶಕನೇ l ಬೇಡಿದೆ ನಿನ್ನನೇ ದೇವ ಕಾಯಿ ಕಡುಬು ಪ್ರಿಯನೇ ll ಗಣಗಳಿಗಧಿಪತಿಯು ನೀನೇ ದೇವ ಗಜ ಮುಖನೆ l ವಿಧ್ಯಾಬುದ್ಧಿಯ ಕರುಣಿಸೋ ವಿಧ್ಯಾಧಿಪತಿಯು ನೀನೇ ll ಪ್ರಥಮ ಪೂಜೆಯು ನಿನಗೆ ದೇವ ಲೋಕ ಕಾಯೋ ಏಕದಂತನೆ l ಕೈಯ ಮುಗಿವೆನು ನಿನಗೆ ಸ್ವಾಮಿ ಕರುಣೆ ಇರಲಿ ಎಂದಿಗೂ ll

----------------------------------

Reg ID: BF25-5106

Please Note - You can vote only Once. If you have already voted - the voting will be disabled automatically by the system.

25
Votes
243
Views
8 Months
Since posted

VOTING Closed on Nov 30, 2025!

Scroll to Top