Submission 1832

ಮಳೆಯಬ್ಬರ

Submitted By: Annapoorna N kuthaje

----------------------------------

ನೀಲವರ್ಣದ ಆಗಸ ಕರಿಮೋಡಗಳಿಂದಾವರಿಸಿ ಚಿತ್ರ ವಿಚಿತ್ರವಾದ ಆಕಾರಗಳ ಸೃಷ್ಟಿ ಮಾಡಿತ್ತು ಗಡಗಡ ನಡುಗುವ ಚಳಿಯಲ್ಲೂ ಮಾರುತನ ಬಿರುಸಾದ ಬೀಸುವಿಕೆ ಮುಂದುವರಿದಿತ್ತು ಹನಿಹನಿಯಾಗಿ ಸುರಿಯುತ್ತಿದ್ದ ಮಳೆಹನಿ ಗುಡುಗಿನೊಡಗೂಡಿ ಭೋರೆಂದು ಫರ್ಜಿಸಿತ್ತು ಕಣ್ಣು ಕೋರೈಸುವ ಮಿಂಚಿನ ಬೆಳಕಿ ನಿಂದಾಗಿ ಭಯಾನಕ ಲೋಕವೊಂದು ಉಧ್ಬವವಾಗಿತ್ತು ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಕೊಂಚ ಸಮಯದಿ ತನ್ನ ಕಾರ್ಯವ ಮುಗಿಸಿತ್ತು ಬೆಚ್ಚನೆಯ ಹೊದಿಕೆ ಹೊದ್ದು ಕಿಟಿಕಿಗಳೆಡೆಯಿಂದ ನೋಡುತ್ತಿದ್ದ ನನಗೆ ಸೋಜಿಗವೆನಿಸಿತ್ತು

----------------------------------

Reg ID: BF25-5104

Please Note - You can vote only Once. If you have already voted - the voting will be disabled automatically by the system.

0
Votes
108
Views
11 Months
Since posted

VOTING Closed on Nov 30, 2025!

Scroll to Top