Submission 1826

ತಂಪೆರೆಯುವ ಮಳೆ

Submitted By: Dr. D. D. Kulkarni

----------------------------------

ಕಡಿಮೆಯಾಯಿತು ಕುದಿಯುವ ಶೆಕೆಯ ರಗಳೆ ಇಳೆಗೆ ಬಂದೆರೆಗಿತು ವರ್ಷದ ಮೊದಲ ಮಳೆ ಜನರ ಮೊಗದಲ್ಲಿ ಮೂಡಿತು ಮಂದಹಾಸದ ಕಳೆ ತೊಲಗಿ ಹೋಯಿತು ಭೂಮಿಗಂಟಿದ ಕೊಳೆ ||೧|| ಮಿಂಚು ಮಳೆಗೆ ಅಂಜಿ ಬಂತೊಂದು ಪಾರಿವಾಳ ವ್ಯಕ್ತ ಪಡಿಸುತ್ತಿತ್ತು ಸಂಗಾತಿ ಕಳೆದು ಕೊಂಡ ಕಳವಳ ಅರಿಯದಾಯಿತು ನನ್ನ ಮನವು ಅದರ ಕಷ್ಟ ಚಿರಂಜೀವಿಗೆ ಆಗಿತ್ತು ಅದನ್ನು ಸಾಕಲು ಬಲು ಇಷ್ಟ||೨|| ನಭದಿಂದ ಸುರಿಯುತ್ತಿದ್ದು ಮಂಜುಗಡ್ಡೆಯ ಕಲ್ಲುಗಳು ಸವಿಯಲು ಹಾತೊರೆಯುತ್ತಿದ್ದವು ಚಿಣ್ಣರ ಮನಸ್ಸುಗಳು ಶುರುವಾಯಿತು ಅನ್ನದಾತನ ಮನದೊಳಗೆ ಲೆಕ್ಕಾಚಾರ ನೆಲೆಸಲಿ ಎಲ್ಲರ ಜೀವನದಲ್ಲಿ ಆನಂದ ನಿರಂತರ ||೩

----------------------------------

Reg ID: BF25-5102

Please Note - You can vote only Once. If you have already voted - the voting will be disabled automatically by the system.

67
Votes
440
Views
8 Months
Since posted

VOTING Closed on Nov 30, 2025!

Scroll to Top