Submission 1812

ಸಂಗಾತಿ ಸಂತೃಪ್ತಿ

Submitted By: ಸಂಗಾತಿ ಸಂತೃಪ್ತಿ

----------------------------------

ಆತುರದಿ ಅತ್ತೆ ಮನೆಗೆ ಸೊಸೆಯಾಗುವುದಲ್ಲ ಕಾತುರದಿ ಮಾವನ ಮನೆಗೆ ಅಳಿಯನಾಗುವುದಲ್ಲ ಕಾದು ಪಡೆದ ಕರಿಮಣಿ ಕತ್ತರಿಸುವುದಲ್ಲ ಧಾರೆ ಎರೆದು ಕೊಟ್ಟರೆ ಮುಗಿಲಿಲ್ಲ ದಾರ ಕಟ್ಟಿದರೆ ಮುಗಿಯುವುದಲ್ಲ ಬದುಕಿನ ದಾರಿಯುದ್ದಕ್ಕೂ ದರ ದರ ಎಳೆಯುವ ದಾರ ಬಹುದೂರ ಸಾಗಬೇಕು ಹೊಂದಿಸಿ ಬರೆಯಬೇಕು ತಂದಾಕುವವನ ತಲೆದಿಂಬಿನ ಬೇಸರಕೆ ಕಿವಿಯೋಲೆ ತಾಕಿಸುವ ಅವಳೆದೆ ಆಸರೆ ತಟ್ಟಿ ಮಲಗಿಸುವ ಬಳೆಗಳೆ ಮುತ್ತಿಟ್ಟು ಎಚ್ಚರಿಸುವ ಬಾಳ್ವೆ ಸೀರೆಯ ದಡಿಗೆ ಅವನೆಜ್ಜೆಗಳೆ ಜೋಡಿ

----------------------------------

Reg ID: BF25-5039

Please Note - You can vote only Once. If you have already voted - the voting will be disabled automatically by the system.

0
Votes
81
Views
8 Months
Since posted

VOTING Closed on Nov 30, 2025!

Scroll to Top