Submission 1673

ಗಜ಼ಲ

Submitted By: ಮೈಬೂಬಸಾಹೇಬ. ವೈ.

----------------------------------

ಹಗಲು ಒಂಟಿ ನಡೆವಾಗ,ರಾತ್ರಿ ಕನಸು ಕದಿವಾಗ ಅವಳ ನೆನಪಾಗುತ್ತದೆ ಕಣ್ಣು ಚಿತ್ರ ಬರೆಯುವಾಗ, ನಾ ಒಂಟಿಯೆಂದಾಗ ಅವಳ ನೆನಪಾಗುತ್ತದೆ ಆತುರಾತುರ ನಡೆದು ಬರುತ್ತೇನೆ ಅವಳ ಛಾಯೆ ಹಿಡಿಯಬೇಕೆನಿಸಿದಾಗ ಸೂರ್ಯ ಕತ್ತಲಳಿದಾಗ ಚಂದ್ರ ಕವಿಯ ಕರೆದಾಗ ಅವಳ ನೆನಪಾಗುತ್ತದೆ ಸಹಸ್ರ ಸುಮಗಳ ರಮೆಯು ಹಿಡಿಸಲಾರದು ಅವಳ ಕನ್ನಿಕೆಯ ರಾಜಿಗೆ ಇಬ್ಬನಿಗೆ ಕಾವು ಕೊಟ್ಟಾಗ ಅಂಗಳದ ಹೂ ನಕ್ಕಾಗ ಅವಳ ನೆನಪಾಗುತ್ತದೆ ಯಾರ ಗೋಜಿಗೂ ಹೋಗದೆ ಉಳಿದ ನೆನಹುಗಳು ಗುಡ್ಡೆ ಹಾಕಿರುವೆ ನಾದ ಅಮರವಾದಾಗ,ಸ್ವರವೂ ಎದೆಯ ಹೊಕ್ಕಾಗ ಅವಳ ನೆನಪಾಗುತ್ತದೆ ರೋಮ ರೋಮಗಳಿಗೂ ಅವಳೆದೆಯ ಬಿಸಿಯುಸಿರು ತಾಗಿದೆ 'ಆಝಾದ' ಅವಳಾಣೆ ಸಾಕಿ ಕರೆದಾಗ,ಕಣ್ಣು ಹನಿಸಿ ತೇವವಾದಾಗ ಅವಳ ನೆನಪಾಗುತ್ತದೆ

----------------------------------

Reg ID: BF25-5077

Please Note - You can vote only Once. If you have already voted - the voting will be disabled automatically by the system.

0
Votes
80
Views
8 Months
Since posted

VOTING Closed on Nov 30, 2025!

Scroll to Top