ನೀ ನನಗೆ
Submitted By: ಡಾ ಅಪ್ಪಾಸಾಹೇಬ ವಿ ಸುತಾರ .
----------------------------------
ನೀರ ಮೌನದಲಿ ಹರಿವನೀರಿನ ಸೆಳೆತ ನಿನ್ನ ನೋಟವಂತೆ ನಿನ್ನ ಲಜ್ಜೆಯ ಗುಳಿಕೆನ್ನೆ ಈಗ ನಕ್ಕ ಮಗುವಿನ ನಗುವು ನಿನ್ನ ಗೆಜ್ಜೆ ಕಾಲ್ಗಳ ಸದ್ದು ನನ್ನ ಸಂತಸಕ್ಕೆ ಅರೆದ ಮದ್ದು ಸಂತೆಯ ಗದ್ಧಲಲಿ ಮೌನರಾಗ ನನ್ನ ಮನವು ನಿನ್ನ ಕಂಡಾಗ ತಂಗಾಳಿ ತಂಪು ತನುವಿಗೆ ಹಿತವಂತೆ ನಿನ್ನೆದುರಲಿ ನೋವೆಲ್ಲಾ ಮರೆತಂತೆ ಬಾನಿಗೆ ಬಾನಾಡಿ ಕಲರವಂತೆ ,ಬಾಳ ಹಬ್ಬಕ್ಕೆ ನಿನ್ನ ನುಡಿ ತೋರಣವಂತೆ ಚಿಗುರೆಲೆ ಗಿಡಕ್ಕೆ ವಸಂತ ತಂದಂತೆ ನಿನ್ನುತ್ಸಾಹದಲೆ ನನ್ಹೆಜ್ಜೆಯ ಗುರುತಂತೆ ಹೂ ಹಣ್ಣು ಗಿಡದ ಹೆಸರಂತೆ ನಿನ್ನ ಹೃದಯವಿಂದು ನನ್ನ ಬದುಕಂತೆ.
----------------------------------
Reg ID: BF25-5074
Please Note - You can vote only Once. If you have already voted - the voting will be disabled automatically by the system.