Submission 1637

ಹೆಮ್ಮೆಯಿಂದ ಹೇಳು ಹೆಣ್ಣು ನಾನೆoದು

Submitted By: sujata mathapati

----------------------------------

ಅಸಮಂಜಸ ಉಪಮೇಯ ಕೊಡುವರಿಗೆ ಸಮಂಜಸ ಉತ್ತರ ತಿಳಿಸಿ ಹೆಮ್ಮೆಯಿಂದ ಹೇಳು ಹೆಣ್ಣು ನಾನೆoದು ದುರ್ಗೆ ಹಾಗೆಯೇ ಸಂಹಾರ ಮಾಡುವೆ ನಾನು, ಮನೆಯನ್ನು ಪಾಠಶಾಲೆ ಮಾಡುವೆ ನಾನು, ಲಕ್ಷ್ಮಿಯ ಚಂಚಲತೆ ನಾನು, ಅನಸೊಯಾಳಗಿ ತ್ರಿಮೂರ್ತಿಗಳಿಗೆ ಅನ್ನ ನೀಡುವೆ ನಾನು. ಹೆಮ್ಮೆಯಿಂದ ಹೇಳು ಹೆಣ್ಣು ನಾನೆoದು ಅಹಲ್ಯ ಹಾಗೆ ಸತ್ವ ಪರೀಕ್ಷೆ ನೀಡಬಲ್ಲೆ, ಸೀತೆ ಹಾಗೆ ಅಗ್ನಿ ಪರೀಕ್ಷೆ ನೀಡಬಲ್ಲೆ. ದೌರ್ಪದಿ ಹಾಗೆ ತಾಳ್ಮೆ ಹೊoದಬಲ್ಲೆ, ತಾರಳ ಸತ್ಯ ನಾನೆ, ಮoಡೋದರಿಯ ಸುಂದರ ಖಣಿ ನಾನೆ. ಹೆಮ್ಮೆಯಿಂದ ಹೇಳು ಹೆಣ್ಣು ನಾನೆoದು ಇಂದಿರಾ ಮುoದಾಳತ್ವ ನನ್ನಲ್ಲಿದೆ , ಕಿರಣ ಬೇಡಿಯ ಶಿಸ್ತು ನನಲ್ಲಿದೆ ಕಲ್ಪನಾ ಕನಸು ನ್ನನಲ್ಲಿದೆ ,ಸುನೀತಾಳ ತ್ಯಾಗ ನನ್ನಲ್ಲಿದೆ ಹೆಮ್ಮೆಯಿಂದ ಹೇಳು ಹೆಣ್ಣು ನಾನೆoದು ಇನ್ನೆಷ್ಟು ಸಮoಜಸ ಉಪಮೆಯ ನೀಡಲಿ ನಾನು ವ್ಯಥೆಯೀoದ ಕೇಳುವೆ ನಾನು..... ನನ್ನ ಅಸ್ತಿತ್ವಕ್ಕೆ ಸ್ಥಿರತೆ ಕೊಡಿ ನನ್ನ ಸ್ಥಿರತೆಗೆ ಒಂದು ಅವಕಾಶ ನೀಡಿ.... ನನ್ನಲ್ಲಿ ನನ್ನತನ ತುಂಬಲು ಬಿಡಿ ಹೆಮ್ಮೆಯಿಂದ ನನಗೆ ಹೇಳಲು ಬಿಡಿ ಹೆಣ್ಣು ನಾನೆoದು

----------------------------------

Reg ID: BF25-5068

Please Note - You can vote only Once. If you have already voted - the voting will be disabled automatically by the system.

101
Votes
549
Views
11 Months
Since posted

VOTING Closed on Nov 30, 2025!

Scroll to Top