Submission 1632

ಜೋಡೆತ್ತಿನ ಸವಾರಿ

Submitted By: SHIVAPRASADA M

----------------------------------

ಹೊರಟೆವು ಜೋಡೆತ್ತಿನ ಗಾಡಿಯಲ್ಲಿ ಇದೇ ನಮ್ಮೂರಿನ ಅಂಬಾರಿ ನನ್ನರಸನಿಗೆ ಹರುಷ ಅದನ್ನೇರಲು ಮಳೆಯಲ್ಲಿ ತೊಯ್ದು ತಂಪಾಗಿರುವ ಹೊಲವನ್ನು ಉತ್ತು ಬಿತ್ತಲು ಕಟ್ಟಿ ಕೊಂಡಿರುವೆ ಬುತ್ತಿಯನ್ನು ಬಿಸಿಲು ಆಗಲೇ ಬೆನ್ನಿಗೆ ಬಿದ್ದಿದೆ ದುಡಿದು ತನುವೆಲ್ಲ ಸವೆದಿದೆ ಇನಿಯನಿಗೆ ಜೋಡೆತ್ತುಗಳ ಚಿoತೆ ಅವುಗಳಿಗ ಭೀಮಕಾಯಗಳು ನಿಶ್ಚಿಂತೆಯಾಗಿ ಕೂರಲಾಗುತ್ತಿಲ್ಲ ಹೈಕಳು ಶಾಲೆಗೆ ಹೋದ್ವೋ ಇಲ್ವೋ ಕನಸಿದೆ ಅವರು ಸಾಹೇಬರಾಗಲೆಂದು ಅದ್ಕೆ ಹಗಲು ಇರಳು ಪರಿ ಪಾಟಲು ಈ ಸಲವಾದರೂ ನನಸಾಗುವುದೇ ನೆತ್ತಿಯ ಮೇಲೆ ಹೊಸ ಸೂರು

----------------------------------

Reg ID: BF25-5066

Please Note - You can vote only Once. If you have already voted - the voting will be disabled automatically by the system.

87
Votes
393
Views
8 Months
Since posted

VOTING Closed on Nov 30, 2025!

Scroll to Top