Submission 1619

ನಿಸರ್ಗದ ಕಣ್ಮಣಿ

Submitted By: SHRUTHI RAI K

----------------------------------

ತಣ್ಣನೆ ಗಾಳಿಯು ಬೀಸಲು ಮನವು ನಿಶಬ್ಧವ ಬಯಸಿಹುದು... ಪ್ರಾಣಿ ಪಕ್ಷಿಯ ನೆಲೆಯಿಲ್ಲೇ ಮಾನವ ಮತ್ತೆ ಯೋಚಿಸಿಹನು ನೆಲೆಯದರ ಆಕ್ರಮಿಸಲು... ಬುದ್ಧಿವಂತನೋ ಇವನೂ ಮೂಡನಿವನೋ ಅರಿಯದೀ ಜೀವಿಗೆ ಪ್ರಾಣಪಕ್ಷಿಯ ಕೈಯಲ್ಲಿ ಹಿಡಿದು ಬದುಕುತಿಹುದು ಇವನ ಆರ್ಭಟಕೆ... ಅಲ್ಲಲ್ಲಿರುವರೊಬ್ಬರು ಆಪತ್ಭಾಂದವರಂತೆ ಹಾಗಾಗಿ ಉಳಿದಿವೆ ಇನ್ನೂ ಕಾನನವಾಸಿಗಳಂತೆ... ಪ್ರಾಣಿ ಪಕ್ಷಿಗಳ ವಾಸಸ್ಥಾನ ಇದೆಯೇ ಕರುಣೆಯಿಂದೇನೋ ನೀಡಿಹುದು ಜಾಗೆಯ ಬಾಡಿಗೆಗೆ ಇದ ಮರೆತು ಜ್ಞಾನಿಯು ಅಜ್ಞಾನಿಯಾಗಿ ಮೆರೆಯುತಿಹನು ಸಾಹುಕಾರನಂತೆ... ಯಾವ ಪದವಿ ಪಡೆದರೇನಂತೆ ಇವನ ಮೊಗಕೆ ಉದಾರತನದಿ ಬಲಿಯಾದ ಈ ನಿಸರ್ಗದ ಕಣ್ಮಣಿಗಳ ಮುಂದೆ.. ಅಟ್ಟಹಾಸದಿ ನಾಶ ಮಾಡುತ್ತಿರುವನು ಪ್ರತಿ ಮೂಲವ ಪರಿವೇ ಇಲ್ಲ ಈತನಿಗೆ ಕ್ಷಿತಿಜೆಯ ರುದ್ರತಾಂಡವಾದಾಟವ...

----------------------------------

Reg ID: BF25-5070

Please Note - You can vote only Once. If you have already voted - the voting will be disabled automatically by the system.

0
Votes
101
Views
8 Months
Since posted

VOTING Closed on Nov 30, 2025!

Scroll to Top