Submission 1581

ಭಟ್ಟಿನೀಯ ಭ್ರಾಂತಿ ಚಿತ್ತ

Submitted By: ಚಿದಾನಂದ ಮ ಹೂಗಾರ

----------------------------------

ಭಟ್ಟಿನೀಯ ಭ್ರಾಂತಿ ಚಿತ್ತದೊಳು ಹುಸಿ ನುಡಿಯ ಹದಿಬದೆಯೆಂಬ ಮೋಹನವದು ಚಂದನದಿಂ ತಣಿಸುತ ಮನವನು ಸಮ್ಮುಖದಿ ವಿಜೃಂಭಿಸುವ ವೈಖರಿ ರೋಮ ರೋಮದೊಳು ಮುದನೀಡಿಪುದು ಕಂಗೊಳಿಸುವ ಪರಿ ಅಚ್ಚರಿಯದು ಖಾದ್ಯದೊಳ್ ಪರಿಮಳವ ಬೆರಸಿ ಧೀಮಂತತನದಿಂ ಭಿಮ್ಮನೆ ಬಿಗಿದದು ಸಹವಾಸದೊಳು ಮತ್ಸರವ ಬೆರಸಿ ಸನ್ನಿಧಿಯೊಳು ಸದೆ ಬಡಿವ ತಂತ್ರವದು ಅಡಿಗಡಿಗೆ ಭೀತಿಯ ಬೀಜವಂ ಬಿತ್ತಿ ಭೂರಮೆಯೊಳು ಪ್ರವೀಣನೆಂಬ ಅಹಂದಿಂ ಭವ್ಯ ಪಾಶದೊಳು ಸಿಲುಕಿಸುವೆಯಾ ಎದೆಗುಂದುವ ಗಾವಿಲ ನಾನಲ್ಲ ತಿಳಿಯೇ ಬಟ್ಟಿನೀಯ ಭ್ರಾಂತಿ ಚಿತ್ತವೆ.

----------------------------------

Reg ID: BF25-5057

Please Note - You can vote only Once. If you have already voted - the voting will be disabled automatically by the system.

6
Votes
120
Views
8 Months
Since posted

VOTING Closed on Nov 30, 2025!

Scroll to Top