Submission 1577

ನನ್ನಪ್ಪ

Submitted By: Nagaveni kumbar

----------------------------------

ಕಂಡಿಲ್ಲ ನಾನಿಲ್ಲಿ ದೇವರನು ಭಾಸವಿದೆ ನಿಮ್ಮಂತೆ ಇರಬಹುದೇನು ಬದುಕಲ್ಲಿ ಯಾತನೆ ಬಂದರು ನಿಮಗೆ ಮುನ್ನುಗ್ಗಿ ಸಾಗಿದಿರಿ ವೃಷಭನ ಹಾಗೆ ಧೈರ್ಯಕ್ಕೆ ನೀನೊಬ್ಬ ಗಜಕೇಸರಿ ಅದರಂತೆ ನಡೆಯಲು ತಿಳಿಸಿದಿರಿ ನೋವಿಲ್ಲದೆ ನಲಿವಿನಲಿ ಬೆಳೆಸಿದಿರಿ ನಮ್ಮೆಲ್ಲರನು ದಿನಕೊಮ್ಮೆಯಾದರೂ ಮನದಲ್ಲಿ ಪೂಜಿಸುವೆನು ನಾನರಿಯದ ಬೆಲೆಕಟ್ಟಲಾರದ ಅಪ್ರತಿಮ ಗುರು ನಮಗೆಲ್ಲ ಶಿಕ್ಷಣದ ಅಡಿಪಾಯದ ಬೇರು ಸಿಗದಿತ್ತೇನೋ ಈ ಮಾನ ಸಮ್ಮಾನ ನೀವು ಬರದಿದ್ದರೆ ನನ್ನ ಬದುಕಲಿ ಪ್ರಧಾನ ಇದಕಾಗಿ ನಾ ಕಾತೊರೆದು ಕಿಂಚಿತ್ತು ಸಮಯ ಪಡೆದು ತಲೆ ಬಾಗಿ ವಿನಮ್ರವಾಗಿ ಬರೆದಿರುವೆ ಪತ್ರವೊಂದು ಧನ್ಯತಾ ಭಾವದಿ ಕವನ ನಿಮಗಿದು

----------------------------------

Reg ID: BF25-5055

Please Note - You can vote only Once. If you have already voted - the voting will be disabled automatically by the system.

49
Votes
281
Views
11 Months
Since posted

VOTING Closed on Nov 30, 2025!

Scroll to Top