ಪ್ರೇಮದ ನಗು
Submitted By: ಕಲ್ಪನಾ ಎಸ್ ಪಾಟೀಲ ಕಾವ್ಯಧರೆ
----------------------------------
ನಗುವೆಯಾ ನೀನು ನಗುವೆಯಾ ನೀ ನಗುವಾಗ, ನೀನು ನಗುವಾಗ ಅರಳುವದು ಹೂವಿನ ಲೋಕವೆಲ್ಲ, ಕಣ್ಣಿನಲ್ಲಿ ಕಾಣುವದು ಕನಸುಗಳ ಬಣ್ಣವೆಲ್ಲ ಹೃದಯದಲ್ಲಿ ಕೇಳುತ್ತಿದೆ ಬಿಸುಟ ತಾಳವೆಲ್ಲ ನಕ್ಕಾಗ ಆಡಿದ ನಿನ್ನ ಪದಗಳಿಂದು ಉಸಿರಾಡುವಂತೆ ಮಾಡಿದೆ ನನ್ನ ಮನವಿಂದು ನಿನ್ನ ನಗೆಯ ಸ್ಪರ್ಶ ಮೂಡಿಸಿದೆ ಜೀವದ ಧ್ವನಿಯೊಳು ಹೊಸ ಹರ್ಷ ನೀನು ಅದೆಷ್ಟೆ ದೂರವಿದ್ದರೂ, ನಿನ್ನ ನಗುವ ನೆನೆಯುವ ನನಗೆ ಪ್ರತಿ ಕ್ಷಣವೂ ಪ್ರೀತಿಯ ಪರೀಕ್ಷೆಯೆ ಮುಗಿಯದ ಕಥೆಯಿದು ನಿನ್ನೊಂದಿಗೆ ನೀನೇ ಪ್ರೀತಿ, ನೀನೇ ಕವನ ಈ ಪ್ರೀತಿ ಸಾಗುತ್ತಿದೆ ಸುಮ್ಮನಾಗಿ.
----------------------------------
Reg ID: BF25-5051
Please Note - You can vote only Once. If you have already voted - the voting will be disabled automatically by the system.