Submission 1537

ಬಿತ್ತಿ ಬೆಳೆದವರಾರೋ, ತಿಂದು ತೇಗುವವರಾರೋ

Submitted By: Dr Sunilkumar Malli

----------------------------------

ಬಿತ್ತಿ ಬೆಳೆದವರಾರೋ, ತಿಂದು ತೇಗುವವರಾರೋ, ಮೇಟಿಯ ಮೆಟ್ಟಿ ನಿಂತವಗೆ ಜಗದಲಿ ಸಾಟಿಯಾರೋ।। ಗಡ್ಡದಾವರಾದರೇನು ,ಬಿಳಿಯರಾದರೇನು, ನೊಗ ಹೊರುವುದು ತಪ್ಪೀತೇ? ಕೈಯವರಾದರೇನು , ಕಮಲದವರಾದರೇನು, ಚಾಟಿ ಬೀಸುವುದು ತಪ್ಪೀತೇ? ಬಿತ್ತಿ ಬೆಳೆದವರಾರೋ, ತಿಂದು ತೇಗುವವರಾರೋ, ಮೇಟಿಯ ಮೆಟ್ಟಿ ನಿಂತವಗೆ ಜಗದಲಿ ಸಾಟಿಯಾರೋ।। ಇಂಜಿನ್ನು ಬಂದರೇನು , ಮಶೀನು ಬಂದರೇನು ಕುಂಟೆಯ ಛಾಪು ತಂದೀತೇ? ಯೂರಿಯಾ ಬಂದರೇನು, ಎನ್-ಪಿ-ಕೆ ಬಂದೇನು , ತಿಪ್ಪೆಯ ಸೊಂಪು ತಂದೀತೇ? ಬಿತ್ತಿ ಬೆಳೆದವರಾರೋ, ತಿಂದು ತೇಗುವವರಾರೋ, ಮೇಟಿಯ ಮೆಟ್ಟಿ ನಿಂತವಗೆ ಜಗದಲಿ ಸಾಟಿಯಾರೋ।। ಬೀಟೀ ಬಂದರೇನು , ಓಪೀ ಬಂದರೇನು , ಸಾವಯವಕೆ ಸೆಡ್ಡು ಹೊಡೆದೀತೇ? ಕಾಲುವೆ ಬಂದರೇನು , ಕರೆಂಟು ಬಂದರೇನು , ಮುಂಗಾರಿನ ಎದುರು ಉಳೀದೀತೆ? ಬಿತ್ತಿ ಬೆಳೆದವರಾರೋ, ತಿಂದು ತೇಗುವವರಾರೋ, ಮೇಟಿಯ ಮೆಟ್ಟಿ ನಿಂತವಗೆ ಜಗದಲಿ ಸಾಟಿಯಾರೋ।।

----------------------------------

Reg ID: BF25-5049

Please Note - You can vote only Once. If you have already voted - the voting will be disabled automatically by the system.

0
Votes
87
Views
8 Months
Since posted

VOTING Closed on Nov 30, 2025!

Scroll to Top