Submission 1465

ನನಗೆ ಸಿಕ್ಕ ಲಾಟರಿ

Submitted By: Ramesh Chougala

----------------------------------

ನನ್ನವಳು ಕೃಷ್ಣಸುಂದರಿ, ಮಾತನಾಡೋ ಕಾದಂಬರಿ ಜಗಳಕ್ಕೆ ನಿಂತರೆ ಟಪೋರಿ, ಮಾಡ್ತಾಳೆ ನಮ್ಮನೆ ಚಾಕರಿ ಮನೆಯಲ್ಲಿ ಅವಳು ಹೇಳಿದ್ದೆ ಸರಿ ನನಗೆ ಮತ್ತು ಮಕ್ಕಳ ಮಧ್ಯೆ ರಾಯಭಾರಿ ಮಕ್ಕಳು ಹೋಗೋದಿಲ್ಲ ಅವಳ ಮಾತು ಮೀರಿ ಕೆಲ್ಸ ಮಾಡ್ತಾಳೆ ತನ್ನ ಶಕ್ತಿ ಮೀರಿ ಅವಳೊಡನೆ ಹೊರಟಾಗ ಸವಾರಿ, ನನಗೆ ತುಂಬಾ ಗಾಬರಿ ಎಲ್ಲಾಗುತ್ತೋ ನನ್ ಜೇಬಿಗೆ ಕತ್ತರಿ, ಯಾಕಂದ್ರೆ ಅವಳ ಖರ್ಚು ತುಂಬಾ ದುಬಾರಿ ಯಾವಾಗ್ಲೂ ನನ್ನ ಕರಿತಾಳೆ ರೀ ನಮ್ಮಿಬ್ಬರದು ತುಂಬಾ ಅಪರೂಪದ ಮೈತ್ರಿ ಈ ಕಾಲದಲ್ಲಿ ಇಂತ ಸಂಬಂಧ ದುಬಾರಿ ಅದನ್ನು ಕಂಡು ತುಂಬಾ ಜನರಿಗೆ ಹೊಟ್ಟೆ ಉರಿ ಅವಳು ನನಗೆ ಸಿಕ್ಕಿದ್ದು ನನ್ನ ಜಯಭೇರಿ, ಅವಳಿಲ್ಲದೇ ನಾನೇನೂ ಇಲ್ರಿ

----------------------------------

Reg ID: BF25-5032

Please Note - You can vote only Once. If you have already voted - the voting will be disabled automatically by the system.

2
Votes
102
Views
8 Months
Since posted

VOTING Closed on Nov 30, 2025!

Scroll to Top