Submission 717

"ಬರಿದಾದ ಬಟ್ಟಲು"

ರಚನೆ : ಸನತ್ ಎನ್ ಎನ್ ಸಿ

----------------------------------

ಮನೆಯಲ್ಲಿ ದುಡಿಯುವ ಯಜಮಾನ ಊಟಕ್ಕಿಲ್ಲವಾಯಿತು ವರಮಾನ ಮಕ್ಕಳ ಮನೆ ಮಡದಿ ಇಳಿದರು ಬೀದಿಗೆ ಹಸಿವು ಭಾದೆಯಾಗಿ ಕಾಡಿತ್ತು ಮನೆಯಲ್ಲಿ ಕಾಳು ಕಡಿ ಮುಗಿದಿತ್ತು ಮಗು ಚಿರಿತ್ತು ಅಮ್ಮನ ಎದೇ ಹಾಲಿಗಾಗಿ ಆಹಾರವಿಲ್ಲದೆ ಒಡಲಾಳದಲ್ಲಿ ನೆತ್ತರು ಜಿನುಗಿತ್ತು ಆಹಾರವಾಗಿ ಹೂವ ಹಣ್ಣ ಮಾರಿ ರಸ್ತೆ ಬದಿಗೆ ಜೀವನ ಸಾರಿ ಕಂಡಿತ್ತು ಬಾಳ ಬದುಕ ಕೋರಿ ಕಾಡಿತ್ತು ಪೀಡಿಸಿತ್ತು ಈ ಮಹಾಮಾರಿ ಸೂರು ನೋಡಿದ ಕಣ್ಣುಗಳು ಭವಿಷ್ಯ ಕಂಡಿತು ಜಂತಿಗಳು ಇಂದೋ ನಾಳೆಯೋ ಮುರಿದು ಬೀಳುತ್ತವೆಯೋ ಮನೆಯ ಹಸಿವಿನ ಬರಿದಾದ ಬಟ್ಟಲಲ್ಲಿ.

----------------------------------

ನೋಂದಣಿ ಐಡಿ : KPF-S1-5313

0
Votes
146
Views
1 Year
Since posted

Finished since 496 days, 15 hours and 2 minutes.

Scroll to Top