Submission 681

ಅಪ್ಪ

ರಚನೆ : ಅಂಜನಾ ಎಂ ಜೆ

----------------------------------

ಆಕಾಶದಷ್ಟು ವಿಶಾಲ ಮನಸುಳ್ಳವನು ನನ್ನೆಲ್ಲ ಕನಸುಗಳ ಈಡೇರಿಸುವವನು.. ಬದುಕಿನ ನೋವನ್ನಷ್ಟು ತಾನುಂಡವನು ನಲಿವನ್ನಷ್ಟು ನಮಗಂಚಿದವನು... ವರ್ಣಿಸಲು ಪದಗಳೇ ಸಾಲದ ರೂಪಕ ನೀನು ನನ್ನೆಲ್ಲ ಕನಸುಗಳ ನಿರೂಪಕನು ನೀ... ತನ್ನೆಲ್ಲ ಕನಸುಗಳನ್ನು ನನ್ನಲ್ಲಿ ಕಂಡವನು ಸ್ವಾರ್ಥವ ತೊರೆದು ತಣ್ಣವರಿಗಾಗಿ ದುಡಿದವನು.. ತನ್ನ ಸಾವಿರ ನೋವನ್ನು ಮರೆಮಾಚಿ ನಗುವನ್ನೇ ಬೀರಿದವನು.... ನಿನ್ನ ಪ್ರೀತಿಗೆ ಯಾರಿಲ್ಲ ಪೈಪೋಟಿ ನಿನ್ನ ತ್ಯಾಗಕ್ಕೆ ನೀನೆ ಸರಿಸಾಟಿ... ಇಂತಿ ಅಪ್ಪನ ಮುದ್ದಿನ ಮಗಳು...

----------------------------------

ನೋಂದಣಿ ಐಡಿ : KPF-S1-5291

0
Votes
142
Views
1 Year
Since posted

Finished since 509 days, 4 hours and 33 minutes.

Scroll to Top