Submission 611

ಶಿಲುಬೆ ಏರಿದ್ದಾನೆ.

ರಚನೆ : ಕು!! ಶಾಂತ ಹೆಚ್.ಹರಪನಹಳ್ಳಿ.

----------------------------------

ಶಿಲುಬೆಯೇರಿದ್ದಾನೆ ನ್ಯಾಯಕ್ಕಾಗಿ ಶಾಂತಿದೂತನ ಛಿದ್ರಗೊಳಿಸಿದ ಅದೆಷ್ಟೋ ಹೊಡೆತಗಳು ಇಂದಿಗೂ ರಕ್ತ ಚೆಲ್ಲುತ್ತಿವೆ, ಶಾಂತಿ ಹುಡುಕಿದವನ ಎದೆಗೆ ಕ್ರಾಂತಿಯ ಮುಳ್ಳುಗಳು ಚುಚ್ಚಿವೆ ಸಹಬಾಳ್ವೆಗೆ ಹೊರಟ ಜೀವಕ್ಕೆ ಮೊಳೆಗಳ ಅಲಂಕಾರ ಮಾಡಿ ಕೆಂಪು ಬಣ್ಣದಿ ಶೃಂಗರಿಸಿ ಶಿಲುಬೆಗೇರಿಸಿದ್ದಾರೆ ಹೊಡೆತಗಳ ಓಟಕ್ಕೆ ಎದೆಯ ಬಡಿತ ನಿಂತಂತಾದರೂ ಎದೆ ನಡುಗದೆ ಶಾಂತಿದೂತನಾದ.

----------------------------------

ನೋಂದಣಿ ಐಡಿ : KPF-S1-5207

0
Votes
158
Views
1 Year
Since posted

Finished since 507 days, 0 hours and 22 minutes.

Scroll to Top