Submission 497

ಬೇಂದ್ರೆ..

ರಚನೆ : ಶಿದ್ರಾಮ ತಳವಾರ

----------------------------------

ಮುಂಜಾನೆಯ ಮುಂಗೋಳಿಗೂ ಕವಿಯಿಂದಲೇ ಬೆಳಗು ಅಂಬಿಕಾತನಯದತ್ತ ಏನು ನಿನ್ನದೀ ಬೆರಗು, ಹುಡುಕಲಿಲ್ಲ ತಡಕಲಿಲ್ಲ ಗೀಚಲು ನೀ ಕವಿತೆ ಬದುಕಲ್ಲೇ ಎಲ್ಲ ಇಹುದು ಎಂಬುದ ನೀ ಅರಿತೆ, ದಾರಿಗುಂಟ ಜಗಳ ನಿನದು ಪದಗಳೊಂದು ವೈರಿ ಅಯ್ಯೋ ಎಂದು ಶರಣು ಬಿದ್ದ ಭಾವಗಳೇ ದಾರಿ ಅಂದಂದಿಗೆ ಆನಂದದಿ ಆಸ್ವಾದಿಸೋ ಜೀವನ ನನ್ನ ನಿನ್ನ ಅವನ ಇವನ ಬದುಕೇ ಇಲ್ಲಿ ಕವನ ಅವರ ಇವರ ಗೊಡವಿ ನಿನಗ ಯಾಕೋ ಅಜ್ಜ ಬೇಂದ್ರೆ ಯುಗದ ಜಗದ ಕವಿಯು ನೀ ಕೈ ಮುಗಿವೇ ಅಂದ್ರೆ...

----------------------------------

ನೋಂದಣಿ ಐಡಿ : KPF-S1-5068

0
Votes
159
Views
1 Year
Since posted

Finished since 483 days, 5 hours and 16 minutes.

Scroll to Top