Submission 435

ಒಲವ ವಿರಹ..!

ರಚನೆ : ಹರೀಶ ಹೊಸೂರ

----------------------------------

ನಾ ನಿನ್ನ ಕಂಡು ಮರುಳಾದ ಪ್ರಸಂಗ, ನೆನೆದರೆ ಕಂಪಿಸಲು ದೇಹದಂಗಾಂಗ, ಮಾಡಿದೆ ಮೌನದಿ ತಪೋ ಭಂಗ, ತಟ್ಟಿ ಭಲದಿ ಹೃದಯ ಮೃದಂಗ. ಹರಿಸಿ ಮನದೊಳು ಪ್ರೇಮ ವರ್ಷ, ಹರಡಿದೆ ಎದೆಯೊಳು ವಿಧದಿ ಹರ್ಷ, ಅರಿಯದ ಹೃದಯಕೆ ಪ್ರೇಮ ಸ್ಪರ್ಶ, ಸಾಲು, ಸಾಲು ಕನಸ್ಸುಗಳ ಉತ್ಕರ್ಷ. ಕಟ್ಟಿ ಧೈರ್ಯದಿ ಒಲವ ಬೇಲಿ, ನಿತ್ಯ ನೂತನ ಆಸೆಗಳ ಚೆಲ್ಲಿ, ಭಿನ್ನ ಪ್ರೀತಿಯೊಳು ವಿರಹದಿ ಬಳಲಿ, ಸಂತಸದಿ ಸಾವಿರ ಕನಸ್ಸಿನೊಳು ತೇಲಿ...

----------------------------------

ನೋಂದಣಿ ಐಡಿ : KPF-S1-5016

0
Votes
133
Views
1 Year
Since posted

Finished since 481 days, 21 hours and 6 minutes.

Scroll to Top