Submission 3654

ಜೀವನದಿ

Submitted By: Suprita Gurugouda Patil

----------------------------------

ಅಪ್ಪ ಎಂದರೆ ಆಧಾರ , ನನ್ನ ಮನದಂಗಳದ ಸರದಾರ , ನಿನ್ನ ಜೀವ ಬಿಗಿ ಹಿಡಿದು ಜೀವ ಕೋಟ್ಟೆ ನನಗೆ , ಸಾಯುವವರೆಗೂ ಈ ನನ್ನ ಜೀವನ ಮುಡಿಪು ನಿಮಗೆ , ಎಲ್ಲದಕ್ಕಿಂತ ಹೆಚ್ಚು ನೀವು ತೋರಿಸುವ ಮಮತೆ , ಏನೆಂದು ಬರೆಯಲಿ ನಿಮ್ಮ ಮೇಲೆ ಕವಿತೆ , ಜನ್ಮ ಕೊಟ್ಟಿರಿ ನನಗೆ ಕೋಟಿ ಕೋಟಿ ನಮನ ನಿಮಗೆ . ಓ ಗುರುವೇ ಏನು ನಿಮ್ಮ ವಿಚಾರ , ನಿಮ್ಮದು ಒಂದು ದೊಡ್ಡ ಚಮತ್ಕಾರ , ನೀವು ನಮಗೆ ಪಾಠ ಬೋಧಿಸಿ ಮಾಡ್ಡಿದ್ದಿರಿ ಒಂದು ಉಪಕಾರ , ಕಲಿಸಿದ್ದಿರಿ ನಮಗೆಲ್ಲ ಒಂದು ಒಳ್ಳೆಯ ಸಂಸ್ಕಾರ , ನಿಮ್ಮೆಲ್ಲರ ಪಾದಕ್ಕೆ ನನ್ನದೊಂದು ಶಿರಸ್ಟ್ರಾಂಗ ನಮಸ್ಕಾರ . ಸಾಗುತಿದೆ ದಿನಗಳ ಪಯಣ , ಎಲ್ಲಾ ಕಡೆ ಎಲ್ಲೊ ಖುಷಿಯ ದಿಬ್ಬಣ , ಎಲ್ಲೊ ದೂರದಲ್ಲಿ ಸಾಧನೆಯ ನಿಲ್ದಾಣ ಅಪ್ಪ-ಅಮ್ಮನ ಖುಷಿಯಲ್ಲಿ ಇದೆ ನನ್ನ ಜೀವನ , ಅದನ್ನು ಹುಡುಕುತ್ತಾ ಸಾಗುತಿದೆ ಈ ನನ್ನ ಜೀವನದ ಪ್ರಯಾಣ . ಮುದ್ದು ಸ್ನೇಹಿತೆ, ನನ್ನ ಸ್ನೇಹಿತೆ, ತಾಳ್ಮೆಯ ಪ್ರತಿರೂಪ, ಇಂಥವಳು ಅಪರೂಪ, ತಾಯಿಯಂತೆ ಪ್ರೀತಿ ಕೊಟ್ಟವಳು, ನನ್ನ ಗೆಲುವಿಗಾಗಿ ಕಾದವಳು, ಸ್ನೇಹದಲ್ಲಿ ಚಿನ್ನದ ಗಣಿ ಇವಳು.

----------------------------------

Reg ID: BF25-5805

Please Note - You can vote only Once. If you have already voted - the voting will be disabled automatically by the system.

6
Votes
165
Views
11 Months
Since posted

VOTING Closed on Nov 30, 2025!

Scroll to Top