Submission 2753

ಬೆಳ್ಳಗಾವಿ

Submitted By: Mallappa Irappa Chayappagol

----------------------------------

ನಮ್ಮಯ ನಮ್ಮಯ ಹೆಮ್ಮೆಯ ಬೆಳ್ಳಗಾವಿ ಕೆಮ್ಮಣ್ಣಿನ ಹಸಿರು ಬನಸಿರಿಯ ಬೆಳ್ಳಗಾವಿ ಬೃಹತ್ಯೋದ್ಯಮ ವಿಶ್ವಗಮನದ ಬೆಳ್ಳಗಾವಿ ಕಂದನ ಬಾಯಲಿ ಕುಂದಾನಗರಿ ಬೆಳ್ಳಗಾವಿ //01// ರಾಣಿ ಚನ್ನಮ್ಮಾಜಿಯ ಶೌರ್ಯದ ಬೆಳ್ಳಗಾವಿ ಬೆಳವಡಿ ಮಲ್ಲಮ್ಮನ ಸಾಹಸದ ಬೆಳ್ಳಗಾವಿ ಸಂಗೊಳ್ಳಿ ರಾಯಣ್ಣನ ಕ್ರಾಂತಿಯ ಬೆಳ್ಳಗಾವಿ ಮಹಾತ್ಮ ಗಾಂಧೀಜಿಯ ಶಾಂತಿಯ ಬೆಳ್ಳಗಾವಿ//02// ಜ್ಞಾನದೇಗುಲಗಳ ಅಂದದಾಲಯದ ಬೆಳ್ಳಗಾವಿ ಸರ್ವಧರ್ಮ ಸಮಭಾವ ಭಾವೈಕ್ಯದ ಬೆಳ್ಳಗಾವಿ ಮನಮೋಹಕವಾದ ಸುವರ್ಣ ಸೌಧದ ಬೆಳ್ಳಗಾವಿ ಕವಿ ಋಷಿ ಮಹಾಂತರು ಜನ್ನಿಸಿದ ಬೆಳ್ಳಗಾವಿ//03// ಸುಂದರ ಕೋಟೆಯ ಸರಮಾಲೆಗಳ ಬೆಳ್ಳಗಾವಿ ಸಕ್ಕರೆ, ಖನಿಜ,ಅದಿರುಗಳ ಕಣಜವದು ಬೆಳ್ಳಗಾವಿ ಲೋಹದ್ಹಕ್ಕಿ, ಸೇನೆ ಘರ್ಜಿತ ನೆಲೆವೀಡು ಬೆಳ್ಳಗಾವಿ//

----------------------------------

Reg ID: BF25-5420

Please Note - You can vote only Once. If you have already voted - the voting will be disabled automatically by the system.

860
Votes
3,542
Views
11 Months
Since posted

VOTING Closed on Nov 30, 2025!

Scroll to Top