Submission 2723

ಅಣ್ಣ

Submitted By: Lavanya.M

----------------------------------

ಪಟ್ಟಾಭಿಷೇಕವಿಲ್ಲದೆ ಅಣ್ಣ ಎಂಬ ಪಟ್ಟ ಹೊತ್ತು.... ತಂದೆಯ ಪ್ರತಿರೂಪ ತೊಟ್ಟು, ಅಂಗರಕ್ಷಕನ ಹಾಗೆ ರಕ್ಷಣೆಯಿಟ್ಟು, ತಾಯಿಯ ಪ್ರೀತಿ ಕೊಟ್ಟು, ಒಡಹುಟ್ಟಿದವನು.... ಹುಟ್ಟಿದ ದಿನದಿಂದ ಹಿಡಿದು... ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು, ಕೂಸು ಮರಿ ಹೊತ್ತು, ಸಾವಿರ ಬಾರಿ ಕೀಟಲೆ ಕೊಟ್ಟು, ನಾ ಯೋಚನೆ ಮಾಡದಷ್ಟು ಪ್ರೀತಿ ಕೊಟ್ಟ ಜೇಷ್ಠನು.... ತಂದೆಯ ಹೆಗಲಾಗಿ, ತಾಯಿಯ ನೆರಳಾಗಿ, ಕಷ್ಟದ ಪರಿಹಾರವಾಗಿ, ಸುಖದ ಭಾಗಿಯಾಗಿ, ಜೀವನದ ಬೆನ್ನುಲುಬಾಗಿ ನಿಂತ ನನ್ನ ಅಗ್ರಜನು.... ನನ್ನ ಕಿರುನಗೆ ನೀನು, ಮರೆಯಾಗದ ನೆನಪು ನೀನು, ಕೊನೆಯ ಆಸೆ ನೀನು, ತ್ಯಾಗದ ಭೀಷ್ಮ ನೀನು, ತನ್ನವರಿಗೆ ಜೀವ ನೀನು, ಕತ್ತಲೆಯ ಬೆಳಕು ನೀನು, ಸಹೋದರನೇ......ಹಿರಿಯವನೇ..... ಸ್ವಾರ್ಥದ ಜಗತ್ತಿನಲ್ಲಿ ನಾ ಕಂಡ ನಿಸ್ವಾರ್ಥ ಜೀವ ನೀನು.....

----------------------------------

Reg ID: BF25-5408

Please Note - You can vote only Once. If you have already voted - the voting will be disabled automatically by the system.

32
Votes
279
Views
11 Months
Since posted

VOTING Closed on Nov 30, 2025!

Scroll to Top