ಬಯಕೆ
Submitted By: Sumathi Krishnamurthy
----------------------------------
ನುಣುಪು ಕೆನ್ನೆಗಳನ್ನು ಒಮ್ಮೆ ನೇವರಿಸುವ ಬಯಕೆ ಕೆಂಪು ತುಟಿಗಳನ್ನು ಒಮ್ಮೆ ಆವರಿಸುವ ಬಯಕೆ ಅಗಾಧ ಕನಸು ಹೊತ್ತು ತಿರುಗೋ ಮುಗ್ಧ ಪ್ರೇಮಿಗೆ ಅವಳ ಮುದ್ದು ನಗುವ ಒಮ್ಮೆ ಆದರಿಸುವ ಬಯಕೆ ಇರುಳು ಹೊತ್ತಿನಲ್ಲಿ ಮೊಗವು ಬಾಡುವ ಘಳಿಗೆ ಚಂದ್ರ ತರುವ ಹೊಳಪಿಗೆ ಒಮ್ಮೆ ಕಾತರಿಸುವ ಬಯಕೆ ತಂಗಾಳಿಯಲ್ಲೂ ಬಿಸಿಯೇರುವ ಈ ವಿರಹದ ನೆಪಕೆ ಸುಳ್ಳು ಹೇಳಿ ತನುವ ಒಮ್ಮೆ ಸಾವರಿಸುವ ಬಯಕೆ 'ಸುಮ' ಬಾಣದ ಸಿಹಿಘಾತ ಪ್ರಾಣ ತೆಗೆಯುವ ಪರಿಗೆ ಅವಳಿಗಾಗಿ ಹರಯವನ್ನೇ ಒಮ್ಮೆ ಕಾಪಿರಿಸುವ ಬಯಕೆ
----------------------------------
Reg ID: BF25-5407
Please Note - You can vote only Once. If you have already voted - the voting will be disabled automatically by the system.