ಜ್ಞಾನಾನುರಾಗಿ
Submitted By: Shridevi M Badiger
----------------------------------
ಓದು , ಓದುವುದರಲ್ಲಿ ಅಚ್ಚುಕಟ್ಟಾದವರು... ಜನರ ಮೂಢನಂಬಿಕೆಯ ಚಟ್ಟ ಕಟ್ಟಿದರು... ಜ್ಞಾನದ ದಾಹದಿಂದಲೇ ಪದವಿಯ ಮೇಲೆ ಪದವಿ ಪಡೆದರು... ಜಾತಿ ಎಂಬ ತಂತಿಯನ್ನು ತಿರಿಗಿಸಿ ಕಟ್ಟಿದವರು... ಅಕ್ಷರಗಳ ಬಾನವಾಗಿಸಿ ಪ್ರಯೋಗ ಮಾಡಿಬಿಟ್ಟರು... ಮನುಷ್ಯನೆಂಬ ಜಾತಿಗೆ ಜ್ಞಾನದ ಜ್ಯೋತಿಯನ್ನು ಹಚ್ಚಿದವರು... ಕುರುಡುತನ ಹೋಗಿಸಲೆಂದು ಕರಡು ಸೃಷ್ಟಿಸಿದವರು... ಬಲ್ಲವರ ಬಲವನ್ನು ಕಾಯ್ದೆಯಲ್ಲಿ ಮುರಿದವರು... ಅಧರ್ಮದ ದಾರಿಯಲ್ಲಿ ಕಲಂಗಳ ಸಲಾಕೆ ಹಾಕಿದರು... ಬಲಕ್ಕಿಂತ,ಹಣಕ್ಕಿಂತ ಜ್ಞಾನ ಹೆಚ್ಚೆಂದು ಸಾಬೀತು ಮಾಡಿದರು... ಜನರ ಕೂಗಿಗೆ ಹಿಗ್ಗದೆ ಜ್ಞಾನಕ್ಕೆ ಅನುರಾಗಿಯಾಗಿಯೇ ಉಳಿದವರು ನಮ್ಮ ಅಂಬೇಡ್ಕರ್
----------------------------------
Reg ID: BF25-5331
Please Note - You can vote only Once. If you have already voted - the voting will be disabled automatically by the system.